ಹುಬ್ಬಳ್ಳಿ: “ಲಿಂಗಾಯತ ಸ್ವಾಮೀಜಿ ಕೂಡ ಲಿಂಗಾಯತರಿಗೆ ಮುಖ್ಯಮಂತ್ರಿ ಸಿಗಬೇಕು ಎಂದು ಹೇಳಿರುವುದು ಅನ್ನುವುದು ಅವರ ವೈಯಕ್ತಿಕ ವಿಚಾರವಷ್ಟೇ” ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು, “ಡಿಸಿಎಂ ಶಿವಕುಮಾರ್ ಮುಖ್ಯಮಂತ್ರಿ ಮಾಡಬೇಕು ಎಂಬ ಒಕ್ಕಲಿಗ ಸ್ವಾಮೀಜಿ ಒತ್ತಾಯ ಮಾಡಿರುವುದಾಗಲೀ,
ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ಆ ಸಮಾಜದ ಗುರುಗಳು ಮಾಡಿರುವ ಒತ್ತಾಯವೇ ಆಗಲಿ, ಅದೆಲ್ಲವೂ ಅವರವರ ವೈಯಕ್ತಿಕ ವಿಚಾರವಾಗಿದೆ. ಆದರೆ, ಸರ್ಕಾರದೊಳಗೆ ಇಂಥ ಯಾವುದೇ ಗೊಂದಲಗಳಿಲ್ಲ. .ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ” ಎಂದು ಅವರು ಹೇಳಿದ್ದಾರೆ.
ಯಾವುದೇ ಗೊಂದಲ ಇಲ್ಲ. ಲಿಂಗಾಯತ ಸ್ವಾಮೀಜಿ ಕೂಡ ಅವರ ಸಮಾಜದ ಶಾಸಕು ಮುಖ್ಯಮಂತ್ರಿ ಆಗಬೇಕು ಅನ್ನುವುದು ಅವರ ವೈಯಕ್ತಿಕ ಸಹ ಆಗಿದೆ. ಇದರಲ್ಲಿ ನಾ ಏನು ಹೇಳಬೇಕು. ಸ್ವಾಮೀಜಿಗಳು ಅವರ ಅವರ ಅಭಿಪ್ರಾಯ ಹೇಳಿದ್ದಾರೆ. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆ, ಎಲ್ಲರೂ ಅವರವರ ಅಭಿಪ್ರಾಯ ಕೊಡಬಹುದು. ಇದಕ್ಕೆ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ” ಎಂದು ಹೇಳಿದ್ದಾರೆ.