ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಶ್ರೀನಿವಾಸ್ ಬಂಧಿತ ಆರೋಪಿ. ನಕಲಿ ಅಕೌಂಟ್ಗಳನ್ನು ಸೃಷ್ಟಿಸಿ ವಹಿವಾಟುಗಳನ್ನು ಮಾಡಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ. ಕೋಟಿ ಕೋಟಿ ಹಣ ವಹಿವಾಟು ಮಾಡಲು ಆರೋಪಿ ಸಹಾಯ ಮಾಡಿದ್ದ ಎನ್ನಲಾಗಿದೆ.
ಹಗರಣ ಪ್ರಕರಣದ ಆರೋಪಿಗಳು ಒಂದೊಂದೇ ಸತ್ಯ ಬಾಯಿಬಿಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಕೋಟ್ಯಂತರ ಹಣವನ್ನು ವಹಿವಾಟಿಗೆ 193 ಅಕೌಂಟ್ಗಳನ್ನು ಬಳಸಿಕೊಂಡಿದ್ದರು ಎನ್ನುವುದು ಬಯಲಾಗಿದೆ. ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ಮ ಈ ಎಲ್ಲಾ ಯೋಜನೆಗೆ ಮಾಸ್ಟರ್ ಮೈಂಡ್ ಆಗಿದ್ದ.
ಖಾತೆಯಿಂದ ಹೊರಗೆ ಬಂದಿದ್ದ ಹಣವನ್ನು 193 ನಕಲಿ ಖಾತೆಗಳಿಗೆ ವಹಿವಾಟು ಮಾಡಿದ್ದಾರೆ. ಬಾರ್ನ ಮಾಲೀಕರ ಅಕೌಂಟ್ಗಳಿಗೆ ಹಣ ಕಳುಹಿಸಿ ಪರ್ಸಂಟೇಜ್ ಲೆಕ್ಕದಲ್ಲಿ ಕೋಟಿ ಕೋಟಿ ಹಣವನ್ನು ಡ್ರಾ ಮಾಡಿ
ಹಗರಣದ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲಾಗಿದೆ. ಯಾರದ್ದೋ ಕಂಪನಿ ಹೆಸರಿನಲ್ಲಿ ಇನ್ಯಾರೋ ಖಾತೆ ತೆರೆದು ಕೋಟಿ ಕೋಟಿ ಹಣ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಅಸಲಿ ಕಂಪನಿಗಳ ಮಾಲೀಕರ ಗಮನಕ್ಕೆ ಬಾರದ ರೀತಿಯಲ್ಲಿ ವಂಚನೆ ಮಾಡಲಾಗಿದೆ. ಅದೇ ಕಂಪನಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕೋಟಿ ಕೋಟಿ ಹಣ ವಹಿವಾಟು ಮಾಡಲಾಗಿದೆ. ನಕಲಿ ಅಕೌಂಟ್ನ ಅಸಲಿ ಮಾಲೀಕರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಅಸಲಿ ಮಾಲೀಕರನ್ನ ಕರೆಸಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಅಸಲಿ ಮಾಲೀಕರಿಗೆ ತಮ್ಮ ಕಂಪನಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವುದು ಗೊತ್ತಿಲ್ಲ. ಅದರಲ್ಲೂ ಆ ಖಾತೆಯಲ್ಲಿ ಕೋಟಿ ಕೋಟಿ ಹಣ ಇತ್ತೆ ಎಂದು ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಸಲಿ ಕಂಪನಿ ಮಾಲೀಕರಿಂದ ನಾಲ್ಕು ಎಫ್ಐಆರ್