ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಧ್ಯೆ ಯಾರು ಹುಳಿ ಹಿಂಡಬಾರದು ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಚಂದ್ರಶೇಖರನಾಥ ಸ್ವಾಮೀಜಿಯವರ ಸಿಎಂ ಬದಲಾವಣೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಯಾರು ಸಿಎಂ ಆಗಬೇಕು ಹಾಗೂ ಯಾರು ಡಿಸಿಎಂ, ಸಚಿವರು ಆಗಬೇಕು ಎಂದು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ.
ಅದಕ್ಕಾಗಿಯೇ ಖರ್ಗೆ, ಸೋನಿಯಾ, ರಾಹುಲ್,
ವೇಣುಗೋಪಾಲ್, ಸುರ್ಜೇವಾಲ ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ. ಸ್ವಾಮೀಜಿಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಮಾತಾಡಿದ ಸ್ವಾಮೀಜಿಯವರನ್ನ ಕಳೆದ ವರ್ಷನಮ್ಮ ಕ್ಷೇತ್ರಕ್ಕೆ ಕರೆದು ಬೆಳ್ಳಿ ಕಿರೀಟ ಕೊಟ್ಟಿದ್ದೆ ಅವರು ಯಾಕೆ ಹಾಗೆ ಮಾತಾಡಿದ್ದಾರೋ ಗೊತ್ತಿಲ್ಲ. ನನ್ನ ಪ್ರಕಾರ ಸಿದ್ದರಾಮಯ್ಯನವರು ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು ಆತ್ಮೀಯವಾಗಿದ್ದಾರೆ.
ಅವರಿಬ್ಬರು ತೀರ್ಮಾನ ಮಾಡ್ತಾರೆ. ಅವರಿಬ್ಬರ ನಡುವೆ ತಂದಿಡುವ ಕೆಲಸ ಯಾರು ಮಾಡಬಾರದು. ಮಾತುಗಳು ಅವರಿಬ್ಬರ ನಡುವೆ ಬೆಸುಗೆ ಹಾಕುವಂತಿರಬೇಕು. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಎರಡು ಭರ್ತಿ ಆಗಿದ್ದು ಖಾಲಿ ಇಲ್ಲ ಎಂದಿದ್ದಾರೆ.