ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಎರಡೂ ವರೆ ವರ್ಷದಲ್ಲಿ ಸಿಎಂ ಬದಲಾವಣೆ ವಿಚಾರ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಈ ಬಗ್ಗೆ ಯಾವ ಚರ್ಚೆಯೂ ನಡೆಯುತ್ತಿಲ್ಲ. ಸಿಎಂ ಬದಲಾವಣೆ ವಿಚಾರ ಈಗ ಅಪ್ರಸ್ತುತವಾಗಿದೆ.
ಉಳಿದವರು ಏನೇ ಹೇಳಬಹುದು. ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಹೇಳುತ್ತಿರುವುದು ಕಾಂಗ್ರೆಸ್ ಪಕ್ಷದ ವಿಚಾರ. ಉಳಿದವರು ಅವರ ವೈಯಕ್ತಿಕ ವಿಚಾರ ಹೇಳಿದ್ದಾರೆ ಎಂದರು.
ಒಕ್ಕಲಿಗ ಸಮುದಾಯದ ಸ್ವಾಮೀಜಿ ಮಾತನಾಡಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಬೇರೆಯವರು ಮಾತನಾಡಿರುವ ಕುರಿತು ನಾನು ಏನೂ ಹೇಳೋಕಾಗಲ್ಲ ಎಂದು ತಿಳಿಸಿಅವರು, ಎರಡೂವರೆ ವರ್ಷಕ್ಕೆ ಸಿಎಂ ಬದಲಾವಣೆ ಒಪ್ಪಂದ ವಿಚಾರವನ್ನು ಯಾರು ಹೇಳಿದ್ದು? ಆ ರೀತಿ ಯಾವುದು ಇಲ್ಲ ಎಂದು ಸಚಿವರು ಸ್ಪಷ್ಪಡಿಸಿದರು.
ಸಾರ್ವಜನಿಕವಾಗಿ ಚರ್ಚೆ ಮಾಡಿದರೆ ನಾವೇನೂ ಮಾಡೋಕಾಗಲ್ಲ. ಇದು ಸಾರ್ವಜನಿಕವಾಗಿ ಚರ್ಚೆ ಆಗೋ ವಿಚಾರವೂ ಅಲ್ಲ. ಎರಡೂವರೆ ವರ್ಷ ಸಿಎಂ ಅವಧಿ ಹಂಚಿಕೆ ಕುರಿತು ಆ ವಿಚಾರ ಬಂದಾಗ ನೋಡಿಕೊಳ್ಳೋಣ. ರಾಜಣ್ಣ ಅವರು ಸಿಎಂ ಅಭಿಮಾನಿಯಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಾರ್ವಜನಿಕರು, ಸ್ವಾಮೀಜಿಗಳು ಅವರ ಹೇಳಿಕೆಗಳು ಇವತ್ತಿನ ಪರಿಸ್ಥಿತಿಗೆ ಅಪ್ರಸ್ತುತವಾಗಿವೆ ಎಂದು ಅವರು ಪ್ರಶ್ನಿಸಿದರು.