ಅಹಮದಾಬಾದ್: ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಕ್ರಿಕೆಟಿಗ ಚೇತೇಶ್ವರ್ ಪೂಜಾರ (Cheteshwar Puajra) ಸ್ಪಿನ್ ಬೌಲಿಂಗ್ ನೋಡಿ, ಸ್ಪಿನ್ ಮಾಂತ್ರಿಕ ಖ್ಯಾತಿಯ ರವಿಚಂದ್ರನ್ ಅಶ್ವಿನ್ (Ravichandran Ashwin) ಶಾಕ್ ಆಗಿದ್ದಾರೆ.
ಹೌದು, 4ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) 2ನೇ ಇನ್ನಿಂಗ್ಸ್ ಆರಂಭಿಸಿತ್ತು. ಈ ವೇಳೆ ಪಂದ್ಯ ಡ್ರಾನತ್ತ ಮುಖಮಾಡಿದ್ದರಿಂದ ನಾಯಕ ರೋಹಿತ್ ಶರ್ಮಾ ಚೇತೇಶ್ಚರ್ ಪೂಜಾರ ಹಾಗೂ ಶುಭಮನ್ ಗಿಲ್ ಪ್ರಮುಖ ಬ್ಯಾಟ್ಸ್ಮ್ಯಾನ್ಗಳಿಗೂ ಬೌಲಿಂಗ್ ಮಾಡುವ ಅವಕಾಶ ನೀಡಿದ್ದರು.
ಮಧ್ಯಂತರದಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ ಪೂಜಾರ ಕೇವಲ 1 ರನ್ ನೀಡಿದ್ದರು. ಪಂದ್ಯದ ಬಳಿಕ ಪೂಜಾರ ಬೌಲಿಂಗ್ ಚಿತ್ರವನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಅಶ್ವಿನ್, ನಾನೇನು ಮಾಡಲಿ? ನನ್ನ ಕೆಲಸ ಬಿಟ್ಟುಬಿಡಲಾ? ಎಂದು ಹಾಸ್ಯ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪೂಜಾರ, `ಇಲ್ಲ, ನಾಗ್ಪುರ ಮೊದಲ ಟೆಸ್ಟ್ನಲ್ಲಿ ಗೆಲುವು ತಂದುಕೊಟ್ಟಿದ್ದಕ್ಕಾಗಿ ಧನ್ಯವಾದ ಹೇಳಿದೆ’ ಎಂದಿದ್ದಾರೆ. ಮತ್ತೊಮ್ಮೆ ಇದಕ್ಕೆ ರಿಯಾಕ್ಟ್ ಮಾಡಿರುವ ಅಶ್ವಿನ್ `ನಿಮ್ಮ ಉದ್ದೇಶ ಪ್ರಸಂಶಿಸುತ್ತೇನೆ. ಆದರೆ ಇದು ಹೇಗೆ ಮರುಪಾವತಿಯಾಗಿದೆ ಎಂಬುದೇ ಆಶ್ಚರ್ಯವಾಗಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗಾವಾಸ್ಕರ್ ಟ್ರೋಫಿ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಜಯ ಸಾಧಿಸಿ, ಭಾರತ ಸರಣಿ ಗೆದ್ದಿತು. ಕೊನೆಯ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.