ಬಿಪಿಯನ್ನು ಕಂಟ್ರೋಲ್ನಲ್ಲಿಡಲು ಕೆಲವರು ಔಷಧಿಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಅಂತಹವರು ಈ ಕೆಲವು ಸಲಹೆಗಳನ್ನು ಅನುಸರಿಸುವುದು ಉತ್ತಮ.
ನಮ್ಮ ಜೀವನಶೈಲಿಯನ್ನು ಆರೋಗ್ಯಕರವಾಗಿಸುವ ಮೂಲಕ ಬಿಪಿ ನಿಯಂತ್ರಿಸಲು ಸಾಧ್ಯವಿದೆ.
ಅಧಿಕ ರಕ್ತದೊತ್ತಡದ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎನ್ನುತ್ತದೆ ಸಂಶೋಧನೆ. ಆದ್ದರಿಂದ, 40 ವರ್ಷ ವಯಸ್ಸಿನ ನಂತರ ಪ್ರತಿ ಪುರುಷರು ಅಧಿಕ ರಕ್ತದೊತ್ತಡದ ಲಕ್ಷಣಗಳ ಮೇಲೆ ಕಣ್ಣಿಡ ಬೇಕಾಗುತ್ತದೆ. ನೀವೂ ಅಧಿಕ ಬಿಪಿ ರೋಗಿಗಳಾಗಿದ್ದರೆ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಿ.
ಅಧಿಕ ಬಿಪಿ ಇರುವವರು ಕಡಿಮೆ ಉಪ್ಪನ್ನು ಸೇವಿಸಬೇಕು ಎನ್ನುವುದನ್ನು ನೀವು ಕೇಳಿರುವವಿರಿ. ಆಹಾರದಲ್ಲಿರುವ ಅತಿಯಾದ ಸೋಡಿಯಂ ಹಾನಿಕಾರಕವಾಗಿದೆ. ಈ ಕಾರಣದಿಂದಾಗಿ, ದೇಹದಲ್ಲಿ ನೀರು ಸಂಗ್ರಹವಾಗಲು ಪ್ರಾರಂಭವಾಗುತ್ತದೆ ಮತ್ತು ರಕ್ತದ ಪ್ರಮಾಣವು ಹೆಚ್ಚಾಗುತ್ತದೆ, ಇದು ರಕ್ತನಾಳಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಉಪ್ಪನ್ನು ಪ್ರತಿದಿನ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ನಿಯಮಿತ ವ್ಯಾಯಾಮವನ್ನು ಮಾಡುವುದು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ಇದರೊಂದಿಗೆ, ಯಾವುದೇ ಔಷಧಿ ಇಲ್ಲದೆ ರಕ್ತದೊತ್ತಡವನ್ನು ಕಂಟ್ರೋಲ್ನಲ್ಲಿಡಬಹುದು. ಪ್ರತಿದಿನ ಕೇವಲ 30 ನಿಮಿಷಗಳ ಕಾರ್ಡಿಯೋ ಮಾಡುವುದರಿಂದ ರಕ್ತದೊತ್ತಡವನ್ನು 5 ರಿಂದ 8 ಎಂಎಂ ಎಚ್ಜಿ ಕಡಿಮೆ ಮಾಡುತ್ತದೆ.
ಜಡ ಜೀವನಶೈಲಿಯು ದೀರ್ಘಾವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಪ್ರತಿ ವಾರ 41 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಕಚೇರಿಯಲ್ಲಿ ಕುಳಿತುಕೊಂಡು ಕಳೆಯುವುದರಿಂದ ಅಧಿಕ ರಕ್ತದೊತ್ತಡದ ಅಪಾಯವು ಶೇಕಡಾ 15 ರಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಯಾಕೆಂದರೆ ಅಧಿಕ ಅವಧಿ ಆಪೀಸ್ನಲ್ಲಿ ಕೆಲಸ ಮಾಡುವುದರಿಂದ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ತಿನ್ನಲು ಕಷ್ಟವಾಗುತ್ತದೆ ಎನ್ನಲಾಗುತ್ತದೆ.
ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಅಧಿಕ ಬಿಪಿ ಸಮಸ್ಯೆಯನ್ನು ಕಡಿಮೆ ಮಾಡಬಹುದು
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಆಳವಾದ ಉಸಿರಾಟವು ಉತ್ತಮ ಆಯ್ಕೆಯಾಗಿದೆ. ನಿಧಾನವಾದ ಉಸಿರಾಟವು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಬಿಪಿಯನ್ನು ಕಡಿಮೆ ಮಾಡಲು, ನೀವು ಬೆಳಿಗ್ಗೆ ಮತ್ತು ರಾತ್ರಿ 5 ನಿಮಿಷಗಳ ವ್ಯಾಯಾಮವನ್ನು ಮಾಡಬಹುದು. ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಹೊಟ್ಟೆಯನ್ನು ಒಳಎಳೆಯಿರಿ. ನೀವು ಉಸಿರಾಡುವಂತೆ, ನಿಮ್ಮ ಎಲ್ಲಾ ಒತ್ತಡವು ದೂರವಾಗುತ್ತದೆ.