ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ, ರಾಜ್ಯ ಕಾಂಗ್ರೆಸ್ಸಿನ ಭಿನ್ನಮತ ಹೆಚ್ಚಾಗಲಿದೆ ಎಂದು ಬಿಜೆಪಿ ಹೇಳಿದ್ದ ಭವಿಷ್ಯ ನಿಜವಾಗುವತ್ತ ಸಾಗುತ್ತಿದೆ. ಇದರ ಬೆನ್ನಲ್ಲೇ ಇಂದಿನಿಂದ ಮೂರು ದಿನಗಳ ಕಾಲ ಚನ್ನಪಟ್ಟಣದಲ್ಲಿ ಡಿಸಿಎಂ ಡಿಕೆಶಿ ಪ್ರವಾಸ ಕೈಗೊಂಡಿದ್ದಾರೆ.
ಮನೆ ಬಾಗಿಲಿಗೆ ಸರ್ಕಾರ, ಇರಲಿ ನಿಮ್ಮ ಸಹಕಾರ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಜನಸ್ಪಂದನ ಕಾರ್ಯಕ್ರಮದ ಮೂಲಕ ಜನಸಾಮಾನ್ಯರನ್ನು ಬೇಟಿಗೆ ಮುಂದಾಗಿದ್ದಾರೆ.
ಚನ್ನಪಟ್ಟಣದ ವಿರುಪಾಕ್ಷಿಪುರ, ಮಳೂರು, ಹೊಂಗನೂರು ಹಾಗು ಚನ್ನಪಟ್ಟಣ ಟೌನ್ ಸೇರಿದಂತೆ ಹಲವು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಲಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಡಿಕೆ ಶಿವಕುಮಾರ್ ಈ ಮೂಲಕ ಚನ್ನಪಟ್ಟಣ ಜನಸಾಮಾನ್ಯರನ್ನು ತಲುಪಲು ಮುಂದಾಗಿದ್ದಾರೆ. ಚನ್ನಪಟ್ಟಣ ಉಪಚುನಾವಣೆ ಪೂರ್ವತಯಾರಿಗೆ ಮುಂದಾಗಿದ್ದಾರೆ.
ಚನ್ನಪಟ್ಟಣ ಪ್ರವಾಸದ ವಿವರ ಹೀಗಿದೆ
- ಜುಲೈ 1 ತಾರೀಕಿಗೆ ಭೂಹಳ್ಳಿ, ವಿರಾಪಿಕ್ಷಿಪುರ ಗ್ರಾಮಕ್ಕೆ ಭೇಟಿ
- ಜುಲೈ-2 ರಂದು ಮಳೂರು, ಹೊಂಗನೂರಿಗೆ ಭೇಟಿ
- ಜುಲೈ-3ರಂದು ಚನ್ನಪಟ್ಟಣ ಟೌನ್ ನಲ್ಲಿ ಎರಡು ಕಡೆ ಕಾರ್ಯಕ್ರಮ
- ರಾಜ್ಯ ಸರಕಾರದ ನೂತನ ಕಾರ್ಯಕ್ರಮ ಜನಸ್ಪಂದನ ಸಭೆ
ಈಗಾಗಲೇ ಮೂರು ಬಾರಿ ಕಾರ್ಯಕ್ರಮ ಯಶಸ್ವಿಗೊಳಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್, ಮನೆ ಬಾಗಿಲಿಗೆ ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಟೈಟಲ್ ಅಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಮೂಲಕ ಹೇಗಾದರೂ ಮಾಡಿ ಮತದಾರ ಪ್ರಭುಗಳನ್ನು ಒಲಿಸಿಕೊಳ್ಳಲು ಸ್ವತಃ