ಕಲಬುರಗಿ ಜಿಲ್ಲಾಧಿಕಾರಿ ಮನೆಯಲ್ಲಿ ಆರಡಿ ಉದ್ದದ ಹಾವು ಪ್ರತ್ಯಕ್ಷಗೊಂಡಿದೆ. ಹೌದು ನಗರದ ಜಗತ್ ವೃತ್ತ ಸಮೀಪದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರ ಸರ್ಕಾರಿ ನಿವಾಸದಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಮನೆಯಲ್ಲಿ ಸುಮಾರು ಏಳು ಅಡಿ ಉದ್ದದ ಕೆರೆ ಹಾವು ಕಂಡು ಮನೆಯಲ್ಲಿ ಇದ್ದವರು ಗಾಬರಿಯಾದರು.
ಮನೆಯಲ್ಲಿದ್ದವರು ತಕ್ಷಣವೇ ಫೌಜಿಯಾ ತರನ್ನುಮ್ ಅವರ ಗಮನಕ್ಕೆ ತಂದರು. ಏಕಾಏಕಿ ಹಾವನ್ನು ಕಂಡು ಗಾಬರಿಯಾದ ಫೌಜಿಯಾ ತರನ್ನುಮ್ ಅವರು, ಉರಗ ರಕ್ಷಕ ಪ್ರಶಾಂತ್ ಅವರನ್ನು ಮನೆಗೆ ಕರೆಯಿಸಿದರು. ಪ್ರಶಾಂತ್ ಅವರು ಕೆರೆ ಹಾವು ಹಿಡಿದು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟರು.