ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಚುರುಕು ಪಡೆದುಕೊಂಡಿದ್ದು, ಕೆಆರ್ಎಸ್ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯಾಗುತ್ತಿದೆ. ಸ್ವಲ್ಪ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಹೀಗಾಗಿ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಕೆಆರ್ಎಸ್ ಡ್ಯಾಂ ಒಳಹರಿವಿನ ಪ್ರಮಾಣ 9,369 ಕ್ಯೂಸೆಕ್ ಇದೆ. ನಿನ್ನೆಗಿಂತ ಒಳಹರಿವಿನಲ್ಲಿ ಮಳೆ ಸ್ವಲ್ಪ ತಗ್ಗಿರುವ ಹಿನ್ನಲೆ ಒಳಹರಿವು ಇಂದು ಅಲ್ಪ ಇಳಿಕೆಯಾಗಿದೆ.
ಇಂದಿನ ಕೆಆರ್ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ – 124.80 ಅಡಿ.
- ಇಂದಿನ ಮಟ್ಟ – 95.50 ಅಡಿ.
- ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
- ಇಂದಿನ ಸಾಮರ್ಥ್ಯ – 19.487 ಟಿಎಂಸಿ
- ಒಳ ಹರಿವು – 9,369 ಕ್ಯೂಸೆಕ್
- ಹೊರ ಹರಿವು – 518 ಕ್ಯೂಸೆಕ್