ಬೆಂಗಳೂರು: ರಾಜ್ಯ ಕಾಂಗ್ರೆಸ್ ಲೋಕಸಭೆ ಚುನಾವಣೆ ಬಳಿಕ ಒಡೆದ ಮನೆಯಂತಾಗಿದೆ, ಒಂದು ಟೀಂ ಸಿಎಂ ಬದಲಾವಣೆಗೆ ಒತ್ತಾಯ ಮಾಡ್ತಿದ್ರೆ. ಮತ್ತೊಂದು ಟೀಂ ಸಮುದಾಯವಾರು ಡಿಸಿಎಂಗೆ ಪಟ್ಟು ಹಿಡಿದಿದೆ, ಪವರ್ ಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು ಕೆಪಿಸಿಸಿ ಅಧ್ಯಕ್ಷರನ್ನೇ ಬದಲಾವಣೆ ಮಾಡವ ಪ್ಲಾನ್ ಮಾಡಿದೆ.
ಸಿಎಂ ಬದಲಾವಣೆ, ಡಿಸಿಎಂ ಬೇಡಿಕೆಗೆ ಕೈ ಹೈಕಮಾಂಡ್ ಖಡಕ್ ವಾರ್ನಿಂಗ್ ಕೊಟ್ಟಿದ್ದು ರಾಜ್ಯ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ….
ಲೋಕಸಭೆ ಚುನಾವಣೆ ನಂತ್ರ ರಾಜ್ಯ ಕಾಂಗ್ರೆಸ್ ನಲ್ಲಿ ಪವರ್ ಪಾಲಿಟಿಕ್ಸ್ ಜೋರಾಗ್ತಿದೆ, ಡಿಕೆಶಿ ಟೀಂ ನಿಂದ ಸಿಎಂ ಬದಲಾವಣೆ ಕೂಗು ಜೋರಾಗ್ತಿದೆ. ಸಿಎಂ ಬದಲಾವಣೆ ಆಗ್ರಹಕ್ಕೆ ಟಾಂಗ್ ಕೊಡಲು ಸಿದ್ದು ಬಣದಿಂದ ಸಮುದಾಯವಾರು ಡಿಸಿಎಂ ಕೂಗು ಹೆಚ್ಚಾಗ್ತಿದೆ. ಈ ಟೀಂ ವಾರ್ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿದೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸ್ತಿದ್ದ ಕೈಪಡೆ ರಾಜ್ಯ ನಾಯಕರುನ್ನು ದೆಹಲಿಗೆ ಕರೆಸಿಕೊಂಡು ವಾರ್ನಿಂಗ್ ಕೊಟ್ಟಿದೆ….
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಹಿರಿಯ ಸಚಿವರು ದೆಹಲಿಗೆ ಹೋಗಿದ್ರಿ ಇದೇ ವೇಳೆ ಕೈ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ರಿ. ಈ ವೇಳೆ ರಾಜ್ಯದ ಘಟನೆಗಳ ಬಗ್ಗೆ ಮಾಹಿತಿ ಪಡೆದ ನಾಯಕರು ಪವರ್ ಪಾಲಿಟಿಕ್ಸ್ ಹೇಳಿಕೆಗೆ ಗರಂ ಆಗಿ ರಾಜ್ಯ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ ರಾಹುಲ್ ಗಾಂಧಿ. ಪಕ್ಷದಲ್ಲಿ ಸಿಎಂ, ಡಿಸಿಎಂ ಚರ್ಚೆಯಾಗದಂತೆ ನೋಡಿಕೊಳ್ಳಿ, ಸೂಕ್ತ ಸಮಯದಲ್ಲಿ ನಾವು ನಿರ್ಧಾರ ಮಾಡುತ್ತೇವೆ. ಯಾರು ಕೂಡ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಬಾರದು, ಬಹಿರಂಗ ಹೇಳಿಕೆ ನೀಡಿದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. ಹೀಗಾಗಿ ಯಾರು ಕೂಡ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಬೇಡಿ ಎಂದು ರಾಗಾ ತಾಕೀತು ಮಾಡಿ ಕಳಿಸಿದ್ದಾರೆ..
ಈ ಪವರ್ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಲು ಕೈ ಹೈಕಮಾಂಡ್ ಬೇರೆಯದ್ದೇ ಪ್ಲಾನ್ ಮಾಡಿದ್ದು ಹೆಚ್ಚುವರಿ ಡಿಸಿಎಂ ಬಿಟ್ಟು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಲು ಮುಂದಾಗಿದೆ. KPCC ಅಧ್ಯಕ್ಷರ ಬದಲಾವಣೆ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆ ಶುರುವಾಗಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ ಬಳಿ 2 ಪ್ರಬಲ ಖಾತೆಗಳಿರೋದ್ರಿಂದ
ಪಕ್ಷ ಸಂಘಟನೆಗೆ ಅನುಕೂಲವಲ್ಲ. ಅಧ್ಯಕ್ಷರ ಬದಲಾವಣೆ ಮಾಡಿದ್ರೆ ಸೂಕ್ತವೆಂದು ವರಿಷ್ಠರಿಗೆ ರಾಜ್ಯದಿಂದ ವರದಿ ಹೋಗಿದ್ಯಂತೆ, ಹೊಸಬರು ನೇಮಕವಾದ್ರೆ ಪಕ್ಷದಲ್ಲಿನ ಸಮಸ್ಯೆಗೆ ಬ್ರೇಕ್ ಬೀಳಲಿದೆ ಅನ್ನೋ ಪ್ಲಾನ್ ಮಾಡಲಾಗಿದೆ. ಬಿಬಿಎಂಪಿ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆವರೆಗೂ ಡಿಕೆಶಿಯೇ ಮುಂದುವರೆಯಬೇಕೆಂದು ಹಲವರ ಬೇಡಿಕೆಯಾಗಿದ್ದು. ಈ ಮಧ್ಯೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ
ಹಾಗೂ ಪ್ರಧಾನ ಕಾರ್ಯದರ್ಶಿಗಳಿಂದ ವರದಿ ತರಿಸಿಕೊಂಡಿದೆ ಹೈಕಮಾಂಡ್…
ಇನ್ನು ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಹೈಕಮಾಂಡ್ ಏನು ಮಾಡುತ್ತೋ ಗೊತ್ತಿಲ್ಲ ಶಾಸಕರು, ಮುಖಂಡರು ತಮ್ಮ ಅಭಿಪ್ರಾಯ ತೆಗೆದುಕೊಳ್ತಾರೆ. ವೀಕ್ಷಕರನ್ನು ರಾಜ್ಯಕ್ಕೆ ಕಳಿಸಿ ಅಭಿಪ್ರಾಯ ಸಂಗ್ರಹ ಮಾಡುತ್ತೆ ಅಧ್ಯಕ್ಷರನ್ನು ಬದಲಾಯಿಸಬೇಕು ಅಂತ ಅನಿಸಿದರೆ ಬದಲಾಯಿಸುತ್ತೆ ಎಂದಿದ್ದಾರೆ ಪರಂ.
ಸಿಎಂ ಸ್ಥಾನ ಡಿಕೆಶಿಗೆ ಬಿಟ್ಟು ಕೊಡುವ ಕುರಿತ ಸ್ವಾಮೀಜಿಗಳ ಹೇಳಿಕೆ ವಿಚಾರಕ್ಕೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇಪ್ಪ ಟಾಂಗ್ ಕೊಟ್ಟಿದ್ದಾರೆ5ವರ್ಷ ಅಧಿಕಾರ ನಡೆಸುವಂತೆ ಜನ ಅಧಿಕಾರಕ್ಕೆ ತಂದಿದ್ದಾರೆ. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ಧೆ ಖಾಲಿ ಇಲ್ಲ, ಸಿದ್ಧರಾಮಯ್ಯ ಶಾಸಕರ ಅಭಿಪ್ರಾಯದ ಮೇಲೆ ನೇಮಕವಾಗಿದ್ದಾರೆ. ಸಿಎಂ ಹುದ್ಧೆ ಖಾಲಿ ಇಲ್ಲ ಎನ್ನುವಾಗ ಇದರ ಬಗ್ಗೆ ಚರ್ಚೆ ಅನಾವಶ್ಯಕ ಪಕ್ಷದ ಹಿತದೃಷ್ಟಿಯಿಂದ ಆಂತರಿಕವಾಗಿ ಇದು ಚರ್ಚೆ ಆಗಬೇಕು ಎಂದಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್
ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ ಈಗ ಸಿದ್ದರಾಮಯ್ಯ ಸಿಎಂ ಖುರ್ಚಿಯಲ್ಲಿ ಕುಳಿತಿದ್ದಾರೆ. ಖಾಲಿ ಇರುವಾಗ ಚರ್ಚೆ ಮಾಡಬೇಕು ಖಾಲಿ ಇಲ್ಲದಿರುವಾಗ ಚರ್ಚೆ ಅಗತ್ಯವಿಲ್ಲ. ಒಕ್ಕಲಿಗರು, ಲಿಂಗಾಯತರು, ದಲಿತರು ಡಿಸಿಎಂ ಹುದ್ದೆ ಕೇಳ್ತಿದ್ದಾರೆ ಅವರು ಕೇಳುವುದರಲ್ಲಿ ತಪ್ಪೇನಿದೆ. ಹೈಕಮಾಂಡ್ ಹಾಕಿದ ಗೆರೆಯನ್ನ ನಾವ್ಯಾರು ಧಾಟುವುದಿಲ್ಲ ಏನೇ ಇದ್ದರೂ ನಮ್ಮ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ ಜಮೀರ್
ಒಟ್ನಲ್ಲಿ ರಾಜ್ಯದಲ್ಲಿ ಚರ್ಚೆಯಾಗ್ತಿದ್ದ ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ಕೂಗಿಗೆ ವಾರ್ನಿಂಗ್ ಕೊಡೋ ಮೂಲಕ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ ಕಾಂಗ್ರೆಸ್ ಹೈಕಮಾಂಡ್. ಪವರ್ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಲು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪ್ಲಾನ್ ಮಾಟಿದೆ ಕೈಪಡೆ. ವಾರ್ನಿಂಗ್ ಕೊಟ್ಟ ಮಾತ್ರಕ್ಕೆ ಪವರ್ ಪಾಲಿಟಿಕ್ಸ್ ಕೂಲ್ ಆಗುತ್ತೆ ಅನ್ನೋದಂತು ಸುಳ್ಳು. ಸದ್ಯ ಹೈಕಮಾಂಡ್ ತೆಗೆದುಕೊಳ್ಳೋ ತೀರ್ಮಾನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ…