ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಝಹೀರ್ ಇಕ್ಬಾಲ್ ಮದುವೆಯಾಗಿದ್ದಾರೆ. ಹಿಂದೂ, ಮುಸ್ಲಿಂ ವಿವಾಹ ಎಂಬ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಜೋಡಿಗಳು ಸಿಂಪಲ್ ಆಗಿ ನಾಗಾರೀಕ ವಿವಾಹವಾಗಿದ್ದರು. ಇದೀಗ ಮದುವೆಯಾದ ವಾರಕ್ಕೆಲ್ಲಾ ಪತಿ ಝಹೀರ್ ಕೈಗೆ ನಟಿ ಚಪ್ಪಲಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸೋನಾಕ್ಷಿ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ.
ಜೂನ್ 23ರಂದು ಝಹೀರ್ ಇಕ್ಬಾಲ್ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮದುವೆಯಾಗಿ ಒಂದು ವಾರ ಕಳೆದಿದ್ದು, ಗಂಡನ ಕೈಗೆ ಚಪ್ಪಲಿ ಕೊಟ್ಟಿದ್ದಾರೆ. ಅದನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಟಿ ಹಂಚಿಕೊಂಡಿದ್ದು, ಚೆಂದದ ಅಡಿಬರಹ ಕೂಡ ನೀಡಿದ್ದಾರೆ.
ಶಾಪಿಂಗ್ ಮಾಲ್ನಲ್ಲಿ ಪತಿ ಝಹೀರ್ ತನ್ನ ಚಪ್ಪಲಿ ಹಿಡಿದುಕೊಂಡು ಹೋಗುತ್ತಿರುವ ಫೋಟೋ ಶೇರ್ ಮಾಡಿದ ನಟಿ, ಇಷ್ಟಪಟ್ಟವರನ್ನು ಮದುವೆಯಾದರೆ ಇರುತ್ತದೆ ಎಂದು ಅಡಿಬರಹ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ.
ಕಳೆದ 7 ವರ್ಷಗಳ ಹಿಂದೆ 2017ರ ಜೂನ್ 23ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಬರೆದುಕೊಂಡಿದ್ದರು.