ಸಿದ್ದರಾಮಯ್ಯ ಐದು ವರ್ಷ ಇರಬೇಕು ಎನ್ನುವ ಕ್ಲಿಯರ್ ಸಿಗ್ನಲ್ ಅನ್ನು ಹೈಕಮಾಂಡ್ ಕೊಡಬೇಕಿತ್ತು. ಸಿದ್ದರಾಮಯ್ಯ ಅವರನ್ನ ಕೈಕಟ್ಟಿ ಹಾಕುವ ಕೆಲಸ ನಡೆಯುತ್ತಿದೆ ಎಂದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಪದವಿ ಕಿತ್ತಾಟ ವಿಚಾರವಾಗಿ ಸಂಸದ ಜಗದೀಶ್ ಶೆಟ್ಟರ್ ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯರನ್ನು ಕೈಕಟ್ಟಿ ಹಾಕುವುದರಿಂದ ರಾಜ್ಯದಲ್ಲಿ ಅತಂತ್ರ ಸರ್ಕಾರ ಆಗುತ್ತೆ. ಇಂತಹ ಪರಿಸ್ಥಿತಿಯಿಂದ ಸರ್ಕಾರಕ್ಕೂ ಡ್ಯಾಮೇಜ್ ಆಗುತ್ತೆ. ಆಡಳಿತ ವ್ಯವಸ್ಥೆ ಹದಗಡುತ್ತಿದೆ ಆಂತರಿಕ ಕಲಹದಿಂದ ಸರ್ಕಾರಕ್ಕೆ ತೊಂದರೆ ಆಗುತ್ತೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ದೃಢವಾದ ನಿರ್ಧಾರ ತೆಗೆದುಕೊಂಡು ಎಸ್.. ಆರ್.. ನೋ ಅಂತ ಹೇಳಬೇಕು. ಒಂದು ಡಿಸಿಎಂ ಇದ್ದಿದ್ದು ಮೂರು ಡಿಸಿಎಂ ಆಗಲಿ ಮುಖ್ಯಮಂತ್ರಿ ಬದಲಾವಣೆ ಆಗಲಿ ಅನ್ನೋ ಗೊಂದಲ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ.
ಯಾರ ಮನಸಲ್ಲಿ ಏನಿದೆ ಅನ್ನೋದನ್ನ ಬೇರೆಯವರಿಂದ ಹೇಳಿಸುವ ಪ್ರಯತ್ನ ಆಗುತ್ತಿದೆ. ಏನು ಹೇಳಬೇಕು ಅನ್ನೋದನ್ನ ಹೈಕಮಾಂಡ್ ಮುಂದೆ ಹೇಳಬೇಕು. ನಾನು ಕಾಂಗ್ರೆಸ್ ನಲ್ಲಿ ಇದ್ದರೂ ಕೂಡ ಈ ಬಗ್ಗೆ ಗೊತ್ತಾಗಿರಲಿಲ್ಲ. ಸಿಎಂ ಹುದ್ದೆಗಾಗಿ ಮೊದಲಿನಿಂದಲೂ ಗುದ್ದಾಟ ಇದ್ದೇ ಇದೆ. ಈಗಲೂ ಅದು ಮುಂದುವರೆದಿದೆ. ಬಿಜೆಪಿ ಆಪರೇಷನ್ ಕಮಲ ಮತ್ತೊಂದು ಮಾಡುವುದು ಬೇಕಾಗಿಲ್ಲ. ಕಾಂಗ್ರೆಸ್ʼನ ಒಳ ಬೇಗುದಿಯಿಂದ ಶಾಸಕರ ಅಸಮಾಧಾನವೇ ಸರ್ಕಾರಕ್ಕೆ ಎಫೆಕ್ಟ್ ಆಗುತ್ತೆ ಎಂದರು.