ನವದೆಹಲಿ: ನರೇಂದ್ರ ಮೋದಿ ಪೂರ್ಣ ಹಿಂದೂ ಸಮಾಜ ಅಲ್ಲ, ಆರ್ಎಸ್ಎಸ್, ಬಿಜೆಪಿ ದೇಶದ ಸಂಪೂರ್ಣ ಹಿಂದೂಗಳ ಪ್ರತಿನಿಧಿಯಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಒಳ್ಳೆಯ ಸ್ಟ್ಯಾಂಡಪ್ ಕಾಮಿಡಿಯನ್ ಆಕ್ಟ್ ಮಾಡಿದ್ದಾರೆ ಎಂದು ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಲೇವಡಿ ಮಾಡಿದ್ದಾರೆ. ಲೋಕಸಭೆ ಮೊದಲ ದಿನದ ಅಧಿವೇಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ,
ರಾಹುಲ್ ಗಾಂಧಿ ಒಳ್ಳೆಯ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಕ್ಟ್ ಮಾಡಿದ್ದಾರೆ. ಏಕೆಂದರೆ ನಮ್ಮ ಎಲ್ಲಾ ದೇವಾನು ದೇವತೆಗಳನ್ನ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡಿದ್ದಾರೆ. ಶಿವನು ಆಶೀರ್ವಾದ ಮಾಡಿ ಎತ್ತಿದ ಕೈ ಕಾಂಗ್ರೆಸ್ನ ʻಕೈʼ ಎಂಬುದು ಅವರ ವಾದವಾಗಿತ್ತು. ಹಾಗಾಗಿ ನಾವು ಕೊನೇವರೆಗೂ ನಗುತ್ತಲೇ ಇದ್ದೆವು ಎಂದು ವ್ಯಂಗ್ಯವಾಡಿದ್ದಾರೆ. ರಾಜಕುಮಾರ (ರಾಹುಲ್ ಗಾಂಧಿ) ಬಂದಾಗ ಪ್ರಧಾನಿ ಮೋದಿ ಸ್ವಾಗತಿಸಲಿಲ್ಲ ಎಂಬುದು ಅವರ ಪ್ರಮುಖ ದೂರು ಆಗಿತ್ತು.
ಆದ್ದರಿಂದ ಅವರು ಎಂತಹ ಸ್ಟ್ಯಾಂಡ್ಅಪ್ ಕಾಮಿಡಿ ಮಾಡಿದರು ಅಂತಾ ನೀವು ಅರ್ಥಮಾಡಿ ಕೊಳ್ಳಬಹುದು ಎಂದರ ಲ್ಲದೇ ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ರಾಹುಲ್ ಗಾಂಧಿ ಹಿಂದೂ ದೇವರು, ಹಿಂದೂ ಧರ್ಮ, ಹಿಂದೂ ಧರ್ಮ ಅನುಸರಿಸು ವವರನ್ನು ಅವಮಾನಿಸಿದ್ದಾರೆ. ಹಿಂಸಾತ್ಮಕ ಭಾವನೆಯನ್ನು ಪ್ರಚೋಸಿದಿದ್ದಾರೆ. ಅವರು ತಮ್ಮ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.