ಅಂಜುಮನ್ ಮಹಾವಿದ್ಯಾಲಯ-ಸ್ನಾತಕೋತ್ತರ ಅಧ್ಯಯನ, ರಾಜ್ಯಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಕಾಲೇಜಿನ ಭವನದಲ್ಲಿ ‘ಭೌತಿಕ ಆಸ್ತಿ ಹಕ್ಕುಗಳು’ ಬಗ್ಗೆ ಒಂದು ದಿನದ ಕಾರ್ಯಾಗಾರ ಜರುಗಿತು. ಕಾರ್ಯಾಗಾರ ಉದ್ಘಾಟಿಸಿದ ಹುಬ್ಬಳ್ಳಿಯ ಜನತಾ ಶಿಕ್ಷಣ ಸಮಿತಿ ಸಕ್ರಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.
ಬಾಬುಲಾಲ್ ದರಗದ ‘ಹಕ್ಕು ಸ್ವಾಮ್ಯ ನೊಂದಣಿ ಪ್ರಕ್ರಿಯೆ’ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ತಾಂತ್ರಿಕ ಅಧಿವೇಶನದಲ್ಲಿ ‘ಭೌತಿಕ ಹಕ್ಕುಗಳು’ ಬಗ್ಗೆ ಸಹ-ಪ್ರಾಧ್ಯಾಪಕಿ ಡಾ. ಶಶಿರೇಖಾ ಮಾಳಗಿ, ‘ಟ್ರೇಡ್ ಮಾರ್ಕ್ ಮತ್ತು ಅದರ ಉಲ್ಲಂಘನೆ’ ಕುರಿತು ಕವಿವಿ ಕಾನೂನು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ ಎಂ. ಮಾತನಾಡಿದರು.
ಅಂಜುಮನ್ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಂ.ಮಕಾನದಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥ ನಾಗರಾಜ್ ಕನಕನಿ ನೂರಜಹಾನ್ ಗಲಗಲಿ, ಪ್ರೊ.ಸುರೇಶ ಬರಸಿಕಟ್ಟಿ, ಪ್ರೊ.ಶಬಿನಾ ಬೀಡಿ, ಪ್ರೊ.ಜ್ಯೋತಿ ಪಾಟೀಲ, ಪ್ರೊ.ಮುತ್ತುಬಾಯಿ ದರಗದ ಅನೇಕರು ಇದ್ದರು. ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರೊ.ಉಲ್ಲಾಸ ದೊಡ್ಡಮನಿ ಸ್ವಾಗತಿಸಿದರು. ಪ್ರೊ.ನಾಗರಾಜ, ಡಾ. ಎನ್.ಬಿ.ನಾಲವತ್ತವಾಡ ನಿರೂಪಿಸಿದರು.