ಅನಿಲ್ ಕಪೂರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ‘ಬಿಗ್ ಬಾಸ್’ ಒಟಿಟಿ ಸೀಸನ್ 3 ಆರಂಭವಾಗಿ ಕೆಲ ದಿನಗಳು ಕಳೆದಿದೆ. ಈ ಬಾರಿ ಶೋನಲ್ಲಿ ಹೆಚ್ಚು ಗಮನಸೆಳೆದವರು ಅರ್ಮಾನ್ ಮಲ್ಲಿಕ್. ಏಕೆಂದರೆ, ಅರ್ಮಾನ್ ತನ್ನ ಇಬ್ಬರು ಪತ್ನಿಯರ ಜೊತೆಗೆ ಶೋಗೆ ಎಂಟ್ರಿ ನೀಡಿದ್ದರು. ಇದೀಗ ಇಬ್ಬರು ಪತ್ನಿಯರಲ್ಲಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ. ಈ ಮಧ್ಯೆ ಇದುವರೆಗೂ ಅನ್ಯೋನ್ಯವಾಗಿದ್ದ ಅರ್ಮಾನ್ ರ ಇಬ್ಬರು ಪತ್ನಿಯನ್ನು ಎಲಿಮಿನೇಟ್ ಆಗುತ್ತಿದ್ದಂತೆ ನಾನು ಅರ್ಮಾನ ನ ಮೊದಲ ಪತ್ನಿ ಕೃತಿಕಾ ಅಲ್ಲ ಎಂದು ಪಾಯಲ್ ಹೇಳಿದ್ದಾರೆ.
ಯೂಟ್ಯೂಬರ್ ಆಗಿರುವ ಅರ್ಮಾನ್ ಮಲ್ಲಿಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಯೂಟ್ಯೂಬ್ನಲ್ಲಿ ಅವರ ಚಾನೆಲ್ಗೆ 7.70 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಇನ್ಸ್ಟಾಗ್ರಾಮ್ನಲ್ಲಿ 4.10 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇಂತಹ ಅರ್ಮಾನ್ಗೆ ಪಾಯಲ್ ಮಲ್ಲಿಕ್ ಮತ್ತು ಕೃತಿಕಾ ಮಲ್ಲಿಕ್ ಎಂಬಿಬ್ಬರು ಪತ್ನಿಯರಿದ್ದಾರೆ. ಈ ಮೊದಲು ಅರ್ಮಾನ್ ಮದುವೆಯಾಗಿದ್ದ ಆಕೆಗೆ ಡಿವೋರ್ಸ್ ನೀಡಿದ್ದಾರೆ. ಇದೀಗ ತನ್ನ ಎರಡನೇ ಹಾಗೂ ಮೂರನೇ ಹೆಂಡತಿ ಜೊತೆ ಶೋಗೆ ಎಂಟ್ರಿಕೊಟ್ಟಿದ್ದಾರೆ.
ಇದೀಗ ಶೋನಿಂದ ಒಂದೇ ವಾರಕ್ಕೆ ಎಲಿಮಿನೇಟ್ ಆಗಿರುವ ಪಾಯಲ್, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ನಾನು ಎಂದಿಗೂ ಬಹುಪತ್ನಿತ್ವವನ್ನು ಬೆಂಬಲಿಸಿಲ್ಲ. ಅದು ನಮ್ಮ ಫಾಲೋವರ್ಸ್ಗೂ ಗೊತ್ತಿದೆ. ನಮ್ಮ ವ್ಲಾಗ್ಸ್ ಅಥವಾ ಸಂದರ್ಶನಗಳಲ್ಲಿ ಕೂಡ ಬಹುಪತ್ನಿತ್ವವನ್ನು ಬೆಂಬಲಿಸಿ ಮಾತನಾಡಿಲ್ಲ. ಅರ್ಮಾನ್ ಏನೇ ತಪ್ಪು ಮಾಡಿದ್ದರೂ, ಭಾರತದ ಯಾವ ಪುರುಷರು ಅದನ್ನು ಮಾಡಬಾರದು ಅಂತ ನಾನು ಅಂದುಕೊಳ್ಳುತ್ತೇನೆ. ನಾವು ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ, ಹಾಗಂತ, ಬೇರೆಯವರು ಆ ರೀತಿ ಉಳಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ” ಎಂದು ಪಾಯಲ್ ಹೇಳಿದ್ದಾರೆ.
“ಮಹಿಳೆಗೆ ತನ್ನ ಹುಡುಗ ಇನ್ನೊಬ್ಬಳ ಮನೆಯಲ್ಲಿ ಇರುವುದಕ್ಕಿಂತ ದೊಡ್ಡ ನೋವು ಯಾವುದೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಇದನ್ನು ಎಲ್ಲರೂ ಸಹಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅರ್ಮಾನ್ ಇಲ್ಲದೇ ನಾನು ಇರಲಾರೆ, ಹಾಗೆಯೇ ಕೃತಿಕಾ ಕೂಡ ಇರಲಾರಳು. ಅರ್ಮಾನ್ ಕೂಡ ನಮ್ಮಿಬ್ಬರು ಬಿಟ್ಟು ಇರಲಾರರು” ಎಂದು ಪಾಯಲ್ ಹೇಳಿಕೊಂಡಿದ್ದಾರೆ.
“ಅರ್ಮಾನ್ ಮಲ್ಲಿಕ್ ಮತ್ತೆ ಮದುವೆ ಆದಾಗ ನನಗೆ ನೋವಾಗಿತ್ತು. ನಾನು ಆತನಿಂದ ದೂರವಾಗಿದ್ದೆ. ವರ್ಷಕ್ಕೂ ಅಧಿಕ ಸಮಯ ನಾನು ಮತ್ತು ನನ್ನ ಮಗ ಪ್ರತ್ಯೇಕವಾಗಿ ವಾಸ ಮಾಡಿದ್ದೆವು. ಆದರೆ ಮತ್ತೆ ನಾವು ಒಂದಾದಾಗ ಕೆಲವೊಂದು ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಂಡೆವು. ಅದೃಷ್ಟವಶಾತ್,ಇಂದು ನಾವು ಒಂದು ಕುಟುಂಬವಾಗಿ ಶಾಂತಿಯಿಂದ ಬದುಕುತ್ತಿದ್ದೇವೆ, ಯಾವುದೂ ನಮ್ಮನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಪಾಯಲ್ ಹೇಳಿದ್ದಾರೆ.
“ನಾನು ಅರ್ಮಾನ್ನ ಕಾನೂನುಬದ್ಧ ಹೆಂಡತಿ. ಕೃತಿಕಾ ಮತ್ತು ಅರ್ಮಾನ್ ಅವರ ಮದುವೆಯು ಕಾನೂನುಬದ್ಧ ಅಲ್ಲ. ಆದರೆ ನನಗೆ ತಿಳಿದಿರುವಂತೆ, ಪತಿಯು ಮತ್ತೊಂದು ಮದುವೆಯಾಗಿರುವುದು ಮೊದಲ ಪತ್ನಿಗೆ ಸಮಸ್ಯೆಯಾಗದಿದ್ದರೆ, ಅದು ಸಮಸ್ಯೆಯಲ್ಲ” ಎಂದು ಪಾಯಲ್ ಹೇಳಿದ್ದಾರೆ.