ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ನಟ ದರ್ಶನ್ ಜೈಲು ಸೇರಿದ್ದು ಇಂದಿಗೂ ಸೆರೆಮನೆವಾಸ ಅನುಭವಿಸುತ್ತಿದ್ದು ಹೊರಬರಲು ಶತ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ ಇದರ ಮಧ್ಯ ಪರಪ್ಪನ ಅಗ್ರಹಾರ ಜೈಲಲ್ಲಿ ಗಾಳಿಗೆ ತೂರಲಾಗುತ್ತಿದೆಯಾ ಜೈಲು ನಿಯಮಗಳು..?ಜೈಲು ಬಂಧಿಗಳನ್ನ ಭೇಟಿಯಾಗಲು ಇರುವ ನಿಯಮಗಳೇನು..?
ವಾರದಲ್ಲಿ ಎಷ್ಟು ಬಾರಿ ಜೈಲು ಬಂಧಿಯ ಭೇಟಿಗೆ ಅವಕಾಶ ಇದೆ ಎಂಬೆಲ್ಲಾ ಮಾಹಿತಿಗಳ ಬಗ್ಗೆ ನೋಡೋದಾದ್ರೆ ಸ್ವಲ್ಪ ಕುತೂಹಲಕಾರಿಯಾದ್ರೂ ಜೈಲು ನಿಯಮಗಳು ಉಲ್ಲಂಘನೆಯಾಗುತ್ತಿದೆಯಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಕಾರಾಗೃಹ ಕಾಯ್ದೆ 1894 section56 ಪ್ರಕಾರ ಒಬ್ಬ ಜೈಲು ಬಂಧಿಯು ವಾರದಲ್ಲಿ ಒಮ್ಮೆ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡಬಹುದು
ಕಾರಾಗೃಹ ಕಾಯ್ದೆ 1894 section 57 ಪ್ರಕಾರ ಜೈಲಿನ ಸೂಪರಿಂಡೆಂಟ್ ವಿಶೇಷ ಹಾಗೂ ಅವಶ್ಯಕ ಸಂದರ್ಭದಲ್ಲಿ ಹೆಚ್ಚಿನ ಬಾರಿ ಭೇಟಿಗೆ ಅವಕಾಶ ನೀಡಬಹುದು
ಕಾರಾಗೃಹ ಕಾಯ್ದೆ 1894 section 58 ಪ್ರಕಾರ ಜೈಲು ಬಂಧಿ ಪತ್ರ ಬರೆಯಲು, ಪತ್ರ ಸ್ವೀಕರಿಸಲು ಅನುಮತಿ ಹೊಂದಿರುತ್ತಾರೆ
ಕಾರಾಗೃಹ ಕಾಯ್ದೆ 1894 section 59 ಪ್ರಕಾರ ಜೈಲು ಬಂಧಿಗಳು ತಮ್ಮ ವಕೀಲರನ್ನ ಭೇಟಿ ಮಾಡಲು ಅವಕಾಶ ನೀಡುತ್ತೆ
ಆದರೆ ರಜಾ ದಿನಗಳಲ್ಲಿ ಯಾರನ್ನು ಭೇಟಿಗೆ ಅವಕಾಶ ನೀಡಬಾರದು. ಒಂದು ಜೈಲು ಸೂಪರಿಂಟೆಂಡೆಂಟ್ ವಿಶೇಷ ಸಂದರ್ಭದಲ್ಲಿ ಅವಕಾಶ ನೀಡದ್ರೆ ಅದನ್ನ ರೆಕಾರ್ಡ್ ಮಾಡಬೇಕು ಎಂಬ ನಿಯಮಗಳು ಇಲ್ಲಿವೆ.
ನೂತನ ಬಿಎನ್ ಎಸ್ ಕಾಯ್ದೆ ಏನು ಹೇಳುತ್ತೆ
ವಾರದಲ್ಲಿ ಎರಡು ದಿನ ಜೈಲು ಬಂಧಿ ತನ್ನ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡಬಹುದು ಅಲ್ಲದೆ ವಿಡೀಯೋ ಕಾನ್ಪರೆನ್ಸ್ ಮುಖಾಂತರವೂ ಜೈಲು ಬಂಧಿಗಳು ವಾರದಲ್ಲಿ ಎರಡು ಬಾರಿ ಕುಟುಂಬಸ್ಥರು ಅಥವಾ ಸ್ನೇಹಿತರ ಜೊತೆ ಮಾತನಾಡಲು ಬಿಎನ್ ಎಸ್ ಅವಕಾಶ ನೀಡುತ್ತೆ
ಆದರೆ ದರ್ಶನ್ ವಿಚಾರದಲ್ಲಿ ಯಾವುದು ಇಲ್ಲ ಜೈಲು ಸೇರಿ ಕೆಲವೇ ದಿನಗಳಲ್ಲಿ ಹಲವರ ಭೇಟಿಗೆ ಅವಕಾಶ ಈಗಾಗಲೇ ಪತ್ನಿ ವಿಜಯ ಲಕ್ಷ್ಮಿ, ಮಗ ವಿನೀಷ್, ತಾಯಿ ಮೀನಾ ತೂಗುದೀಪ, ತಮ್ಮ ದಿನಕರ್, ನಟ ವಿನೋದ್ ಪ್ರಭಾಕರ್, ನಟ ಧನ್ವಿರ್, ರಕ್ಷಿತಾ ಪ್ರೇಮ್, ಪ್ರೇಮ್ ಹೀಗೆ ಹತ್ತಾರು ಜನರು ಭೇಟಿಗೆ ಅವಕಾಶ ನೀಡುತ್ತಿರುವ ಜೈಲು ಅಧಿಕಾರಿಗಳು
ದರ್ಶನ್ ಗೆ ಒಂದು ನ್ಯಾಯ ಉಳಿದ ಬಂಧಿಗಳಿಗೆ ಒಂದು ನ್ಯಾಯ ಅನುಮಾನ ಮೂಡಿಸುವಂತಿದೆ ಜೈಲು ಅಧಿಕಾರಿಗಳ ನಡೆ ಇದಕ್ಕೆಲ್ಲಾ ಜೈಲು ಅಧಿಕಾರಿಗಳೆ ಉತ್ತರ ನೀಡಬೇಕು ಅಥವಾ ಗೃಹ ಸಚಿವರು ಉತ್ತರಿಸುತ್ತಾರೋ ಕಾದು ನೋಡಬೇಕು!