ಸ್ಯಾಂಡಲ್ ವುಡ್ ನಟ ಹಾಗೂ ಬಿಗ್ ಬಾಸ್ ವಿಜೇತ ಪ್ರಥಮ್ ಗೆ ಇತ್ತೀಚೆಗೆ ದರ್ಶನ್ ಅಭಿಮಾನಿಗಳಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ನಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಈ ಪ್ರಕರಣದ ವಿಚಾರವಾಗಿ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದು, ಇನ್ಮೇಲೆ ಲೀಗಲ್ ಆಗಿ ಹೋಗ್ತೀನಿ ಎಂದು ವಾರ್ನಿಂಗ್ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಜೈಲು ಸೇರಿರುವ ಕುರಿತು ಪ್ರಥಮ್ ಪ್ರತಿಕ್ರಿಯೆ ನೀಡಿದ್ದರು. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಥಮ್ ಗೆ ಬೆದರಿಕೆ ಕರೆ ಮಾಡಿದ್ದರು. ಪ್ರಥಮ್ಗೆ ಮತ್ತೆ ಬೆದರಿಕೆ ಬೆನ್ನಲ್ಲೇ ಕಿಡಿಗೇಡಿಗಳಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದರು. ಬಳಿಕ ಸ್ಟೇಷನ್ಗೆ ಬಂದವರು ಪ್ರಥಮ್ ಫ್ಯಾನ್ಸ್ ಅಂತಾ ಹೈಡ್ರಾಮಾ ಮಾಡಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಪ್ರಥಮ್, ಅಂಧಾಭಿಮಾನಿಗಳೇ, ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ. ಮನೆಗೆ ಪೊಲೀಸ್ ನೋಟಿಸ್ ಬಂದ ಮೇಲೆ ಸ್ಟೇಷನ್ಗೆ ಬಂದು ನಾವು ಪ್ರಥಮ್ ಫ್ಯಾನ್, ಯಾರೋ ಫೇಕ್ ಪ್ರೊಫೈಲ್ ಮಾಡಿ ಬಿಟ್ಟಿದ್ದಾರೆ ಅಂತಾ ಕಾಲಿಗೆ ಬೀಳ್ತೀರಾ. ಸೋಶಿಯಲ್ ಮೀಡಿಯಾದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್ಗೆ ಬಂದಾಗ ಯಾಕಿಲ್ಲ? ನೀವು ಬುದ್ದಿ ಕಲಿಯಲ್ಲ. ಇನ್ಮೇಲೆ ಲೀಗಲ್ ಆಗಿ ಹೋಗ್ತೀನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.