ಬೆಂಗಳೂರು: ರಾಜ್ಯದಲ್ಲಿ ಹೆಚ್3ಎನ್2 (H3N2) ವೈರಸ್ ಆತಂಕ ಹೆಚ್ಚಾಗಿದೆ. ಕಳೆದ 82 ದಿನಗಳಲ್ಲಿ ಬರೋಬ್ಬರಿ 115 ಪ್ರಕರಣಗಳು ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಸೈಲೆಂಟ್ ವೈರಸ್ ಡೆಡ್ಲಿ ಅಟ್ಯಾಕ್ ಮಾಡಲಿದೆ ಎನ್ನುವ ಭೀತಿ ಕಾಡುತ್ತಿದೆ.
ಕೊರೊನಾ (Corona) ಬಳಿಕ ಮತ್ತೆ ಹೆಚ್3ಎನ್2 ಎಂಬ ಹೊಸ ವೈರಸ್ ಜನರನ್ನು ನಡುಗಿಸುತ್ತಿದೆ. ಅತಿಯಾದ ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆಯ ಲಕ್ಷಣಗಳನ್ನು ಹೊಂದಿರುವ ಈ ವೈರಸ್ ರಾಜ್ಯದ 21 ಜಿಲ್ಲೆಗಳಲ್ಲಿ ಸದ್ದಿಲ್ಲದೆ ಹರಡಿದೆ. ಬೆಂಗಳೂರು (Bengaluru) ಸೇರಿ ರಾಜ್ಯದ 21 ಜಿಲ್ಲೆಗಳಲ್ಲಿ ಕೇವಲ 82 ದಿನಗಳಲ್ಲಿ ಬರೋಬ್ಬರಿ 115 ಪ್ರಕರಣಗಳು ದಾಖಲಾಗಿವೆ.
ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಬೆಂಗಳೂರು ಒಂದರಲ್ಲೇ 30 ಪ್ರಕರಣಗಳು ದಾಖಲಾಗಿವೆ. ನಗರದ ಮೂಲೆ ಮೂಲೆಗೂ ಈ ವೈರಸ್ ಹರಡಬಹುದೆಂಬ ಆತಂಕವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಸೈಲೆಂಟ್ ಆಗಿಯೇ ಹರಡುತ್ತಿರುವ ಈ ವೈರಸ್ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎನ್ನುತ್ತಿದ್ದಾರೆ.
ಎಲ್ಲೆಲ್ಲಿಎಷ್ಟೆಷ್ಟುಪ್ರಕರಣ?
ಬೆಂಗಳೂರು/ ಬಿಬಿಎಂಪಿ ವ್ಯಾಪ್ತಿ – 30
ಶಿವಮೊಗ್ಗ – 19
ಧಾರವಾಡ – 14
ಮೈಸೂರು – 09
ವಿಜಯಪುರ – 08
ಬೆಳಗಾವಿ – 05
ಹಾಸನ – 05
ತುಮಕೂರು – 03
ದಾವಣಗೆರೆ – 03
ಹಾವೇರಿ – 03
ದ.ಕನ್ನಡ – 03
ಬೆಂಗಳೂರು ಗ್ರಾಮಾಂತರ – 02
ಗದಗ – 02
ರಾಮನಗರ – 02
ಚಾಮರಾಜನಗರ – 01
ಬಾಗಲಕೋಟೆ – 01
ಉತ್ತರ ಕನ್ನಡ – 01
ಚಿತ್ರದುರ್ಗ – 01
ಚಿಕ್ಕಮಗಳೂರು – 01
ಕೊಡಗು – 01
ಮಂಡ್ಯ – 01
ಹಾಸನ ಜಿಲ್ಲೆಯಲ್ಲಿ ಮಾರ್ಚ್ 1 ರಂದು 87 ವರ್ಷದ ವೃದ್ಧರೊಬ್ಬರು ಹೆಚ್3ಎನ್2ಗೆ ಬಲಿಯಾಗಿದ್ದರು. ಇದು ದೇಶದಲ್ಲೇ ಮೊದಲ ಸಾವಾಗಿತ್ತು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 5 ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳಲ್ಲಿ ಹಾಗೂ 60 ವರ್ಷ ಮೆಲ್ಪಟ್ಟ ವೃದ್ಧರಿಗೆ ಈ ವೈರಸ್ ತೀವ್ರವಾಗಿ ಕಾಡಲಿದ್ದು, ಆಕ್ಸಿಜನ್ ಲೆವೆಲ್ನಲ್ಲೂ ಏರುಪೇರಾಗಲಿದೆ. ಇಷ್ಟು ದಿನ ಕೊರೊನಾ ಕಂಟಕದಿಂದ ಬಚಾವ್ ಆಗಿ, ನೆಮ್ಮದಿಯಿಂದ ನಿಟ್ಟುಸಿರು ಬಿಡುವ ಸಂದರ್ಭ ಬಂತು ಎನ್ನುವಷ್ಟರಲ್ಲಿ ಮತ್ತೆ ಹೆಚ್3ಎನ್2 ಸೋಂಕು ಕಾಡುತ್ತಿದ್ದು, ಜನರಲ್ಲಿ ಆತಂಕ ಹೆಚ್ಚು ಮಾಡಿದೆ.