ಹೈದ್ರಾಬಾದ್: 5 ವರ್ಷದ ಯುಕೆಜಿ ವಿದ್ಯಾರ್ಥಿನಿಯೋರ್ವಳ ತಲೆಗೆ ಪೆನ್ ಚುಚ್ಚಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾಳೆ.
ಈ ದುರಂತ ನಡೆದಿದ್ದು ತೆಲಂಗಾಣದ ಭದ್ರಾದಿ ಕೊತ್ತಗಡ್ಡಂ ಭದ್ರಾದಿಚಲಂನಲ್ಲಿ ಸಂಭವಿಸಿದೆ.5 ವರ್ಷದ ಯುಕೆಜಿ ವಿದ್ಯಾರ್ಥಿನಿ ರಿಯಂಶಿಕಾ ಹೋ ವರ್ಕ್ ಮಾಡುತ್ತಿದ್ದಾಗ ಮಂಚದ ಮೇಲಿನಿಂದ ಕೆಳಗೆ ಬಿದ್ದಾಗ ಕೈಲ್ಲಿದ್ದ ಪೆನ್ನು ತಲೆಗೆ ಚುಚ್ಚಿದೆ .
ಆಗ ಅವಳು ಒದ್ದಾಡುವುದನ್ನ ಕಂಡ ಪೋಷಕರು ಆಸ್ಪತ್ರೆಗೆ ಸಾಗಿಸಿದ್ದಾರೆ.
ತಕ್ಷಣ ಬಾಲಕಿಗೆ ಸರ್ಜರಿ ಕೂಡ ಮಾಡಿದ್ದಾರೆ ಆದರೂ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.