ಬೆಂಗಳೂರು/ ಹುಬ್ಬಳ್ಳಿ : ದೇವರಗುಡ್ಡ ಮತ್ತು ಹಾವೇರಿ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಹಾವೇರಿ ನಿಲ್ದಾಣದಲ್ಲಿನ (ಅಂತಿಮ ಹಂತ) ಇಂಟರ್ಲಾಕ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಹಲವು ರೈಲುಗಳ ಸೇವೆಯು ರದ್ದಾಗಿದೆ. ಇನ್ನು ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಹಿನ್ನೆಲೆ ನೈರುತ್ಯ ರೈಲ್ವೆ ಇಲಾಖೆಯು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, ಅಗತ್ಯ ಬಲಾವಣೆಗಳನ್ನು ಮಾಡಿಕೊಂಡು ಸಂಚಾರಕ್ಕೆ ಸೂಚನೆ ನೀಡಿದೆ. ಯಾವ ರೈಲುಗಳು ರದ್ದಾಗಿವೆ. ಯಾವ ರೈಲು ಮಾರ್ಗ ಬದಲಾವಣೆಯಾಗಿದೆ. ಎಂಬ ಮಾಹಿತಿ ಈ ಕೆಳಗಿನಂತಿದೆ.
ಯಾವ ಯಾವ ರೈಲುಗಳು ರದ್ದು?
- ರೈಲು ಸಂಖ್ಯೆ 17347/48 ಎಸ್.ಎಸ್.ಎಸ್ ಹುಬ್ಬಳ್ಳಿ – ಚಿತ್ರದುರ್ಗ- ಎಸ್.ಎಸ್.ಎಸ್ ಹುಬ್ಬಳ್ಳಿ ನಡುವೆ ಸಂಚರಿಸುವ ದೈನಂದಿನ ಎಕ್ಸ್ಪ್ರೆಸ್ ರೈಲನ್ನು ಮಾರ್ಚ್ 15 ರಿಂದ 20 ವರೆಗೆ ರದ್ದಾಗಿದೆ..
- ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ಎಕ್ಸ್ಪ್ರೆಸ್ ರೈಲನ್ನು ಮಾರ್ಚ್ 17 ರಿಂದ 19ರ ವರೆಗೆ ರದ್ದಾಗಿದೆ..
- ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ನಡುವೆ ಸಂಚರಿಸುವ ದೈನಂದಿನ ಎಕ್ಸ್ಪ್ರೆಸ್ ರೈಲನ್ನು ಮಾರ್ಚ್ 18 ರಿಂದ 20ರ ವರೆಗೆ ರದ್ದಾಗಿದೆ.
- ರೈಲು ಸಂಖ್ಯೆ 17391/92 ಕೆ.ಎಸ್.ಆರ್ ಬೆಂಗಳೂರು – ಎಸ್.ಎಸ್.ಎಸ್ ಹುಬ್ಬಳ್ಳಿ – ಕೆ.ಎಸ್.ಆರ್ ಬೆಂಗಳೂರು ನಡುವೆ ಸಂಚರಿಸುವ ದೈನಂದಿನ ಎಕ್ಸ್ಪ್ರೆಸ್ ರೈಲನ್ನು ಮಾರ್ಚ್ 18 ಮತ್ತು 19 ರಂದು ರದ್ದಾಗಿದೆ.
ಯಾವ ಯಾವ ರೈಲುಗಳ ಮಾರ್ಗ ಬದಲಾವಣೆ?
- ಮಾರ್ಚ್ 18 ರಂದು ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 20656 ಎಸ್.ಎಸ್.ಎಸ್ ಹುಬ್ಬಳ್ಳಿ – ಯಶವಂತಪುರ ಎಕ್ಸ್ಪ್ರೆಸ್ ರೈಲು ಬದಲಾದ ಮಾರ್ಗ ಎಸ್.ಎಸ್.ಎಸ್ ಹುಬ್ಬಳ್ಳಿ, ಹೊಸಪೇಟೆ ಬೈ-ಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ ಮತ್ತು ದಾವಣಗೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆ ಎಸ್.ಎಂ.ಎಂ ಹಾವೇರಿ ಮತ್ತು ಹರಿಹರ ನಿಲ್ದಾಣಗಳು.
- ಮಾರ್ಚ್ 18 ಮತ್ತು 19 ರಂದು ಮೈಸೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16535 ಮೈಸೂರು – ಸೊಲ್ಲಾಪುರ ದೈನಂದಿನ ಎಕ್ಸ್ಪ್ರೆಸ್ ರೈಲು ಬದಲಾದ ಮಾರ್ಗ ದಾವಣಗೆರೆ, ಅಮರಾವತಿ ಕಾಲೋನಿ, ಕೊಟ್ಟೂರು, ಹೊಸಪೇಟೆ ಬೈ-ಪಾಸ್ ಮತ್ತು ಗದಗ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆ ಹರಿಹರ, ರಾಣಿಬೆನ್ನೂರು , ಎಸ್.ಎಂ.ಎಂ ಹಾವೇರಿ ಮತ್ತು ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣಗಳು.
- ಮಾರ್ಚ್ 18 ಮತ್ತು 19 ರಂದು ಸೋಲಾಪುರ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16536 ಸೋಲಾಪುರ – ಮೈಸೂರು ದೈನಂದಿನ ಗೋಲ್ ಗುಂಬಜ್ ಎಕ್ಸ್ಪ್ರೆಸ್ ರೈಲು ಬದಲಾದ ಮಾರ್ಗ ಗದಗ, ಹೊಸಪೇಟೆ ಬೈ-ಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ ಮತ್ತು ದಾವಣಗೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆ ಎಸ್. ಎಸ್. ಎಸ್ ಹುಬ್ಬಳ್ಳಿ, ಎಸ್.ಎಂ.ಎಂ ಹಾವೇರಿ, ರಾಣಿಬೆನ್ನೂರು ಮತ್ತು ಹರಿಹರ ನಿಲ್ದಾಣಗಳು.