ಆನೇಕಲ್:- ಏಯ್ ಹೋಗೋ ಎಂದಿದ್ದಕ್ಕೆ ವಿಶೇಷ ಚೇತನನ ಮೇಲೆ ಡೆಡ್ಲಿ ಆಟ್ಯಾಕ್ ನಡೆದಿರುವ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಾಬಸಂದ್ರದಲ್ಲಿ ಜರುಗಿದೆ. ಕಳೆದ ತಿಂಗಳು 30ನೇ ತಾರೀಖು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಾಬಸಂದ್ರ ವಾಸಿ ನಾಗರಾಜ್(26) ಹಲ್ಲೆಗೊಳಗಾದ ಯುವಕ. ಮುಂಜಾನೆ 3 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಲೆಮನ್ ಡ್ರಾಪ್ಸ್ ಟೀ ಅಂಗಡಿ ಬಳಿ ಟೀ ಕುಡಿದು ವಾಪಸ್ ಆಗುತ್ತಿದ್ದ ವೇಳೆ ಆಟೋದಲ್ಲಿ ಬಂದ ಅಪರಿಚಿತರು ನಾಗರಾಜ್ ಮತ್ತು ಸ್ನೇಹಿತರಿಗೆ ಆವಾಜ್ ಹಾಕಿದ್ದಾರೆ. ಆಗ ನಾಗರಾಜ್ ʼಏಯ್ ಹೋಗ್ರೋʼ ಎಂದಿದ್ದಾರೆ
ಅಷ್ಟಕ್ಕೆ ಮನೆವರೆಗೂ ನಾಗರಾಜ್ನನನ್ನು ಹಿಂಬಾಲಿಸಿದ್ದ ಆರೋಪಿಗಳು, ಮನೆ ಬಳಿ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆಸಿದ್ದಾರೆ. ಮುಖ, ಕೈ, ಕುತ್ತಿಗೆಗೆ ಲಾಂಗ್, ಮಚ್ಚುಗಳಿಂದ ಯದ್ವಾತದ್ವಾ ಕೊಚ್ಚಿ ಹಾಕಿ, ಹಲ್ಲೆ ಬಳಿಕ ಆಟೋ ಸಮೇತ ಪರಾರಿಯಾಗಿದ್ದಾರೆ. ಗಾಯಾಳು ನಾಗರಾಜ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರೌಡಿ ಶೀಟರ್ಗಳಾದ ಮೇಲುಕೋಟೆ ಮೂಲದ ಸೂರ್ಯ, ಯಾರಂಡಹಳ್ಳಿ ವಾಸಿ ಪ್ರವೀಣ್ ಮತ್ತು ಇತರರಿಂದ ಕೃತ್ಯ ನಡೆದಿರುವ ಶಂಕೆ ಇದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ