ಮಂಡ್ಯ: ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದು ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಕೃಷ್ಣರಾಜಸಾಗರ ಡ್ಯಾಂನ ನೀರಿನ ಮಟ್ಟ 100 ಅಡಿ ದಾಟಿದೆ. ಒಂದೇ ವಾರದಲ್ಲಿ ಕೆಆರ್ಎಸ್ ಡ್ಯಾಂಗೆ 12 ಅಡಿಯಷ್ಟು ನೀರು ಬಂದಿದ್ದು,
ಸದ್ಯ 100 ಅಡಿಗೆ ಏರಿಕೆಯಾಗಿದೆ. ಕೆಆರ್ಎಸ್ ಜಲಾಶಯದ ಮಟ್ಟ 100 ಅಡಿಗಿಂತ ಹೆಚ್ಚುವರಿಯಾಗಿರುವುದರಿಂದ ಜು.6 ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಜು.8 ರಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
KRS ಡ್ಯಾಂ ನ ಇಂದಿನ ನೀರಿನ ಮಟ್ಟ
- ಗರಿಷ್ಟ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 100.30ಅಡಿ
- ಒಳಹರಿವು : 9,686 ಕ್ಯೂಸೆಕ್
- ಹೊರಹರಿವು : 546 ಕ್ಯೂಸೆಕ್.
- ಪ್ರಸ್ತುತ ಡ್ಯಾಂ ನ ನೀರಿನ ಸಂಗ್ರಹ:23.047 TM