ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಭೂಮಾಪನ ನಡೆಸಬೇಕು. ನಿಗದಿತ ಅವಧಿಗೆ ಕೆಲಸ ಮಾಡಿದರೆ ನಿಮಗೆ ಕೈಮುಗಿದು ನಮಸ್ಕರಿಸುತ್ತೇನೆ. ಬೇಕಾದರೆ ನಿಮ್ಮ ಕಾಲಿಗೆ ಬೀಳಬೇಕೆ ಎಂದು ಸರ್ಕಾರಿ ಅಧಿಕಾರಿಗಳಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಕೇಳಿಕೊಂಡಿದ್ದಾರೆ.
ನಿತೀಶ್ ಕುಮಾರ್ ಅವರು ಗುರುವಾರ ವಿಶೇಷ ಸರ್ವೇಕ್ಷಣಾ ಸಹಾಯಕ ವಸಾಹತು ಅಧಿಕಾರಿ ಮತ್ತು ಇತರ ಸಂಬಂಧಿತ ಹುದ್ದೆಗಳಿಗೆ ಆಯ್ಕೆಯಾದ 9,888 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಜುಲೈ 2025 ರೊಳಗೆ ಭೂ ಸಮೀಕ್ಷೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕೆಲಸವನ್ನು ಚುನಾವಣೆಯ ಮೊದಲು ಮಾಡಬೇಕು ಎಂದು ನಾನು ಹೇಳಿದ್ದೇನೆ. 2025 ರ ಜುಲೈ ತಿಂಗಳಿಗೆ ಮೊದಲು ಈ ಎಲ್ಲಾ ಕೆಲಸಗಳನ್ನು ಮಾಡಿದರೆ ಅದು ಒಳ್ಳೆಯದು. ನಾನು ನಿಮಗೆ ಕೈ ಜೋಡಿಸಿ ನಮಸ್ಕರಿಸುತ್ತೇನೆ. ನಾನು ನಿಮ್ಮ ಪಾದಗಳನ್ನು ಮುಟ್ಟಬೇಕೆ ಎಂದು ಕೇಳಿದ ಪ್ರಸಂಗ ನಡೆಯಿತು. 9,888 ಹೆಚ್ಚಿನ ಅಧಿಕಾರಿಗಳನ್ನು ನೇಮಿಸಲಾಗಿದೆ. ಇಲಾಖೆಯು 2025 ರ ಜುಲೈ ಒಳಗೆ ರಾಜ್ಯಾದ್ಯಂತ ವಿಶೇಷ ಸಮೀಕ್ಷೆ ಮತ್ತು ಜಮೀನುಗಳ ಇತ್ಯರ್ಥವನ್ನು ಪೂರ್ಣಗೊಳಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.