ಆನೇಕಲ್:- ಆಮ್ಲೆಟ್ ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ಮೇಲೆ ಹಲ್ಲೆ ನಡೆದಿರುವ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೀತಿಧಾಮ ಬಾರ್ ನಲ್ಲಿ ಜರುಗಿದೆ. ನೆನ್ನೆ ಸಂಜೆ 8 ಗಂಟೆಯಲ್ಲಿ ಈ ಘಟನೆ ಜರುಗಿದೆ ಎನ್ನಲಾಗಿದೆ.
ಬಾರ್ ಕ್ಯಾಶಿಯರ್ ಮತ್ತು ಸಪ್ಲೇಯರ್ ನಿಂದ ಈ ಕೃತ್ಯ ನಡೆದಿದೆ. ಕೊಪ್ಪಗೇಟ್ ನಿವಾಸಿ ಬಾಬು(30) ಹಲ್ಲೆಗೊಳಗಾದ ಗ್ರಾಹಕ ಎನ್ನಲಾಗಿದೆ. ಬಾರ್ ಕ್ಯಾಶಿಯರ್ ಸಮಂತ್ ಗೌಡ, ಸಪ್ಲೇಯರ್ ಜೀವನ್ ಗೌಡರಿಂದ ಹಲ್ಲೆ ಆರೋಪ ಕೇಳಿ ಬಂದಿದೆ.
ಬಾರ್ ನಲ್ಲಿ ಎಣ್ಣೆ ಜೊತೆ ನೀಡಿದ್ದ ಆಮ್ಲೆಟ್ ನಲ್ಲಿ ಕಲ್ಲು ಸಿಕ್ಕಿತ್ತು, ಆಮ್ಲೆಟ್ ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಏಕಾಏಕಿ ಹಲ್ಲೆ ಆರೋಪ ಮಾಡಲಾಗಿದೆ. ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಆರೊಪಿಗಳು ಹಲ್ಲೆ ಮಾಡಿದ್ದಾರೆ.
ಆನೇಕಲ್ ತಾಲ್ಲೂಕಿನಲ್ಲಿ ಹಲ್ಲೆ, ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಏಯ್ ಹೋಗೋ ಅಂದಿದ್ದಕ್ಕೆ ನಿನ್ನೆ ವಿಶೇಷ ಚೇತನನ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿತ್ತು. ಯ ಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಾಬಸಂದ್ರದಲ್ಲಿ ನಡೆದಿತ್ತು. ಕಳೆದ ತಿಂಗಳು 30ನೇ ತಾರೀಖು ನಡೆದಿತ್ತು. ಇದೀಗ ಆಮ್ಲೆಟ್ ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಲಾಗಿದೆ. ಪೋಲಿಸರ ಭಯ ಇಲ್ಲದಂತಾಗಿದ್ಯ ಜಿಗಣಿ ಠಾಣಾ ವ್ಯಾಪ್ತಿಯಲ್ಲಿ!? ಆನೇಕಲ್ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಹಾಳಾಗ್ತಿದಿಯ? ಎಂಬೆಲ್ಲಾ ಪ್ರಶ್ನೆ ಮೂಡಿದೆ.