ಹುಬ್ಬಳ್ಳಿ: ಸಿದ್ಧಾರೂಢರ ಭಾವಚಿತ್ರ ಇರುವ ಅಂಚೆ ಚೀಟಿ ಬೇಡಿಕೆಯ 25 ವರ್ಷದ ಪ್ರಯತ್ನಕ್ಕೆ ಅಂತಿಮವಾಗಿ ಫಲ ದೊರಕಿದೆ. ಇದೀಗ ಕೇಂದ್ರ ಸರ್ಕಾರದ ಸಂವಹನ ಸಚಿವಾಲಯ ಅಂಚೆ ಇಲಾಖೆ ಮೂಲಕ ಸಿದ್ಧಾರೂಢರ ಭಾವಚಿತ್ರ ಇರುವ ಅಂಚೆ ಚೀಟಿಗೆ ಅನುಮತಿ ನೀಡಿದೆ.
ಹಿಂಭಾಗದಲ್ಲಿ ಪಚ್ಚೆ ಹಸಿರಿನ ಬಣ್ಣವಿದ್ದು, ಸಿದ್ಧಾರೂಢರು ಮಾಲೆ ಧರಿಸಿ ಆಸೀನರಾದ ₹5 ಮುಖಬೆಲೆಯ ಅಂಚೆ ಚೀಟಿಯಿದು.
ಇದೇ 6ರಂದು ಶ್ರೀಮಠದ ಆವರಣದಲ್ಲಿ ಅದ್ಧೂರಿಯಾಗಿ ಅಂಚೆಚೀಟಿ ಲೋಕಾರ್ಪಣೆಯಾಗಲಿದೆ. ಈ ಕುರಿತು ಒಂದು ವಿಶೇಷ ವರದಿ…
ಅದು ಉತ್ತರ ಕರ್ನಾಟಕ ಭಾಗದಲ್ಲಿನ ಪ್ರಸಿದ್ಧ ಮಠ. ಸರ್ವ ಧರ್ಮಗಳ ಸಮನ್ವಯದ ಕೇಂದ್ರ. ಜಾತಿ ಮತ ಪಂಥ ಮೇಲು ಕೀಳು ಬಡವ ಬಲ್ಲಿದವ ಎನ್ನದೇ ಎಲ್ಲರೂ ನಡೆದುಕೊಳ್ಳುವ ಶಿವಾಲಯ. ಈ ಮಠದ ರೂವಾರಿ ಶ್ರೀ ಸಿದ್ಧಾರೂಢರು ಅವರ ನೆನಪಿಗಾಗಿ ಅವರ ಹೆಸರಿನ ಅಂಚೆ ಚೀಟಿಗಾಗಿ
ಶ್ರೀಮಠದ ಕಾರ್ಯದರ್ಶಿಯಾಗಿದ್ದ ಎಂ.ಎಂ. ಹೂಲಿ ಅವರು 1998ರಲ್ಲಿಯೇ ಸಿದ್ಧಾರೂಢರ ಭಾವಚಿತ್ರ ಇರುವ ಅಂಚೆ ಚೀಟಿ ತರಬೇಕು ಎಂದು ಪ್ರಯತ್ನಿಸಿದ್ದರು. 2005ರಲ್ಲಿ ಮಠದ ಚೇರ್ಮನ್ ಆಗಿದ್ದ ಎಸ್.ಎಸ್. ಹಸಬಿ ಅವರು ‘ವಿಶ್ವ ವೇದಾಂತ ಪರಿಷತ್’ ನಡೆಸಿ ಅಂಚೆ ಚೀಟಿ ತರಲು ಶ್ರಮಿಸಿದ್ದರು. ಅದಕ್ಕೆ ಪ್ರತಿಯಾಗಿ ಪೋಸ್ಟಲ್ ಕವರ್ ಅಷ್ಟೇ ಬಿಡುಗಡೆಯಾಯಿತು. 2012ರಲ್ಲಿ ಚೇರ್ಮನ್ ಆಗಿದ್ದ ಮಹೇಂದ್ರ ಸಿಂಘಿ ಸಹ ಪ್ರಯತ್ನಿಸಿದ್ದರು. ಅದು ಸಹ ಪೋಸ್ಟಲ್ ಕವರ್ಗೆ ಸೀಮಿತವಾಗಿತ್ತು.
ಕಳೆದ ಆಡಳಿತ ಮಂಡಳಿ ಚೇರ್ಮನ್ ಆಗಿದ್ದ ಡಿ.ಡಿ. ಮಾಳಗಿ ಅವರು, ಸಿದ್ಧಾರೂಢರ ಅಂಚೆ ಚೀಟಿ ತರುವ ಕಾರ್ಯಕ್ಕೆ ಮತ್ತೆ ನಾಂದಿ ಹಾಡಿದರು. ಅದಕ್ಕೆ ಪೂರಕವಾದ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಮಠ ಹಾಗೂ ಸರ್ಕಾರದ ನಡುವೆ ಸಾಕಷ್ಟು ಪತ್ರ ವ್ಯವಹಾರಗಳು ನಡೆದಿದ್ದವು.ಈ ಕುರಿತು ಮಾಹಿತಿ ನೀಡಿದ ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, .’ಶ್ರೀಮಠದ ಪದಾಧಿಕಾರಿಗಳು ಫೆಬ್ರುವರಿ ಕೊನೆಯಲ್ಲಿ ದೆಹಲಿಗೆ ತೆರಳಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಖಾಂತರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಅಂಚೆ ಚೀಟಿ ಹೊರತರಲು ವಿನಂತಿಸಿ, ಹಿಂದೆ ಪ್ರಯತ್ನಿಸಿದ ದಾಖಲೆಗಳನ್ನು ನೀಡಿದ್ದೆವು. ಅದಾದ 15 ದಿನದಲ್ಲಿಯೇ (ಮಾರ್ಚ್ 8ರಂದು) ಕೇಂದ್ರ ಅಂಚೆ ಇಲಾಖೆಯಿಂದ ಅಧಿಕೃತ ಮಾಹಿತಿ ಬಂದಿತ್ತು. ಸಿದ್ಧಾರೂಢರ ಭಕ್ತರ ಎರಡೂವರೆ ದಶಕದ ಕನಸು ನನಸಾಗುತ್ತಿದೆ’ ಎಂದರು.
ಇಂದು ಸಂಜೆ ನಡೆಯಲಿರುವ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆ ಅಧಿಕಾರಿಗಳು, ಸಿದ್ಧಾರೂಢರ ಅಂಚೆ ಚೀಟಿ ನಮಗೆ ಹಸ್ತಾಂತರಿಸಲಿದ್ದಾರೆ. ನಿಯಮದ ಪ್ರಕಾರ ಆರಂಭದಲ್ಲಿ ಒಂದು ಲಕ್ಷ ಅಂಚೆ ಚೀಟಿ ಖರೀದಿಸಬೇಕಿದ್ದು, ಅದಕ್ಕೆ ₹5.20 ಲಕ್ಷ ಪಾವತಿಸಿದ್ದೇವೆ. ಶ್ರೀಮಠದಲ್ಲಿ ಭಕ್ತರು ನೋಂದಣಿ ಮಾಡಿಕೊಂಡ ಸೇವೆಯ ಪ್ರಸಾದ ಅವರಿಗೆ ತಲುಪಿಸಲು ತಿಂಗಳಿಗೆ ನಮಗೆ ಸುಮಾರು ₹75 ಸಾವಿರದಿಂದ ₹1 ಲಕ್ಷ ಮೌಲ್ಯದ ಅಂಚೆ ಚೀಟಿ ಅಗತ್ಯವಿದೆ. ಭಕ್ತರ ಖರೀದಿಗೂ ಕೌಂಟರ್ನಲ್ಲಿ ವ್ಯವಸ್ಥೆ ಮಾಡಲಾಗುವುದು. ಮೂರು ತಿಂಗಳ ನಂತರ ಅಂಚೆ ಇಲಾಖೆಯಲ್ಲೂ ಸಿದ್ಧಾರೂಢರ ಅಂಚೆಚೀಟಿ ಲಭ್ಯವಾಗಲಿದೆ’ ಎಂದು ಹೇಳಿದರು.
ಇನ್ನು ಜುಲೈ ೭ ರಂದು ಶ್ರೀ ಸಿದ್ಧಾರೂಢ ಹಾಗೂ ಶ್ರೀ ಗುರುನಾಥರೂಢ ಜಯಂತೋತ್ಸಹ ಸಹ ಕಾರ್ಯಕ್ರಮ ನಾಳೆ ಆಯೋಜನೆ ಮಾಡಿದ್ದು ಇದೇ ವೇಳೆ ಕೋಟಿ ಬಿಲ್ವಾವಾರ್ಹಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಶ್ರೀ ಮಠದ ಟ್ರಸ್ಟ್ ಶಾಮಾನಂದ ಪೂಜಾರ ಹೇಳಿದರು.
ಇಂದಿನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ವೈಷ್ಣವ, ಪ್ರಲ್ಹಾದ್ ಜೋಶಿ, ಕಾನೂನು ಸಚಿವ ಎಚ್ ಕೆ ಪಾಟೀಲ ಸೇರಿದಂತೆ ನಾಡಿನ ಅನೇಕ ಮಠಾಧೀಶರರು ಸಾಕ್ಣಿ ಆಗಲಿದ್ದಾರೆ. ನಿಜಕ್ಕೂ ಇದೊಂದು ಅವಿಸ್ಮರಣೀಯ ದಿನ.