ವಾಯುಮಾಲಿನ್ಯ ಹೆಚ್ಚಳದಿಂದ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ.
ಭಾರತದ 10 ಮಹಾನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣದ ಬಗ್ಗೆ ಅಧ್ಯಯನ ಮಾಡಲಾಗಿತ್ತು.
ಅದ್ರಲ್ಲಿ ಡೆಲ್ಲಿ ಸೇರಿದಂತೆ ಬೆಂಗಳೂರು, ಅಹಮದಾಬಾದ್, ಚೆನ್ನೈ, ದಿಲ್ಲಿ, ಹೈದರಾಬಾದ್, ಕೋಲ್ಕತಾ, ಮುಂಬೈ, ಪುಣೆ, ಶಿಮ್ಲಾ ಮತ್ತು ವಾರಾಣಸಿ ಮಹಾನಗರಗಳು ಇದ್ವು. ಸಧ್ಯ ಇಷ್ಟೂ ನಗರಗಳಲ್ಲಿ ಪ್ರತಿವರ್ಷ 33 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವುದು ಪತ್ತೆಯಾಗಿದೆ. ಆಶ್ಚರ್ಯ ಏನು ಅಂದ್ರೆ ಒಂದು ಕಾಲದಲ್ಲಿ ಆಹ್ಲಾದಕರ ವಾತಾವರಣ ಹೊಂದಿದ್ದ ಬೆಂಗಳೂರಿನಲ್ಲಿ ವಾಯುಮಾಲಿನ್ಯದಿಂದ ವರ್ಷಕ್ಕೆ 2100 ಮಂದಿ ಸಾವನ್ನಪ್ಪುತ್ತಿರುವುದು ಪತ್ತೆಯಾಗಿದೆ.
ಇನ್ನು ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ವಾಯುಮಾಲಿನ್ಯ ಗುಣಮಟ್ಟದ ಮಾರ್ಗಸೂಚಿಗಿಂತಲೂ ಈ ಮಹಾನಗರಗಳು ಕೆಳಮಟ್ಟದಲ್ಲಿಯೇ ಗುಣಮಟ್ಟ ಮುಂದುವರಿದಿದೆ. ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಮಟ್ಟ ಹದಗೆಡುತ್ತಿದ್ದು, ಮುಂದಿನ ದಿನಗಳಲ್ಲಿ ವಾಯುಮಾಲಿನ್ಯ ಸುಧಾರಣೆಯಾಗದಿದ್ರೆ, ಡೆಲ್ಲಿಯನ್ನ ಮೀರಿಸುವ ಸಾಧ್ಯತೆ ಇದೆನಗರದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯದಿಂದಲೂ ಸಿಲಿಕಾನ್ ಸಿಟಿಯಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಳವಾಗಿವೆ.
ಇವುಗಳನ್ನ ಕಡಿಮೆ ಮಾಡುವ ನಿಟ್ಟಿನಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನ ರೂಪಿಸುತ್ತಿದೆ. ನಗರದಲ್ಲಿ ಮೊದಲು ಹಸಿರೀಕರಣ ಹೆಚ್ಚಾಗಬೇಕು. ಇದು ಹೆಚ್ಚಾದಾಗ ಮಾತ್ರ ಕಾಯಿಲೆಗಳು ಹೆಚ್ಚಾಗುವುದನ್ನ ತಡೆಯಬಹುದು ಡಾಕ್ಟರ್ಗಳು ಹೇಳ್ತಿದ್ದಾರೆ