ರಾಜ್ಯದಲ್ಲಿ ಪ್ಯಾರಸಿಟಮಾಲ್ ಮಾತ್ರೆ ಕೊರತೆ ಇಲ್ಲ ಎಂದು KSMSCL ಸ್ಪಷ್ಟನೆ ಕೊಟ್ಟಿದೆ
ಡೆಂಗ್ಯೂ ಜ್ವರ ಹೆಚ್ಚಳ ಹಿನ್ನೆಲೆ ಪ್ಯಾರಸಿಟಮಾಲ್ ಮಾತ್ರೆ ಕೊರತೆ ಆರೋಪ ಕೇಳಿ ಬಂದಿತ್ತು. KSMSL ಸಂಸ್ಥೆಯು ಅವಶ್ಯಕ ಔಷಧಿಗಳನ್ನು ದಾಸ್ತಾನು ನೀಡಿದೆ. ವಾರ್ಷಿಕ ಬೇಡಿಕೆಯ ಟೆಂಡರ್ ಮಾಡಿ ಅವಶ್ಯಕ ಔಷಧಿ ದಾಸ್ತಾನು ನೀಡಿದೆ. ಆರೋಗ್ಯ ಉಪಕರಣ ಔಷಧ 27 ಉಗ್ರಾಣು ದಾಸ್ತಾನುಗಳಿಗೆ ತಲುಪಿಸಿದೆ. 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ಯಾರಸಿಟಮಾಲ್ 650 ಎಂಜಿಗೆ ವಾರ್ಷಿಕ ಬೇಡಿಕೆ ಪ್ರಮಾಣ 8,72,20,40 ಮಾತ್ರೆಗಳಿಗೆ ಬಂದಿದ್ದು, 8.27 ಕೋಟಿ ಮೌಲ್ಯದ ಪ್ಯಾರಸಿಟಮಾಲ್ 650MG ಖರೀದಿಸಲಾಗಿದೆ. ಪ್ರಸ್ತುತ ಈ ಔಷಧವು ಎಲ್ಲಾ ಉಗ್ರಾಣಗಳಿಗೆ ಸರಬರಾಜು ಆಗಿದೆ. 2024 ಜು.4ರ ವೇಳೆಗೆ 3.7 ಕೋಟಿ ಮೌಲ್ಯದ ಮಾತ್ರೆಗಳು ಲಭ್ಯತೆ ಇದೆ. ಸದ್ಯ ಆರೋಗ್ಯ ಸಂಸ್ಥೆಗಳಲ್ಲಿ 3.18 ಕೋಟಿ ಮೌಲ್ಯದ ಮಾತ್ರೆಗಳು ಲಭ್ಯ ಇದೆ. ರಾಜ್ಯದ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರೆಗಳು ಲಭ್ಯ ಇದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ತಿಳಿಸಿದೆ.
ಮಕ್ಕಳಿಗೆ ನೀಡಬಹುದಾದ ಪ್ಯಾರಸಿಟಮಾಲ್ ಮಾತ್ರೆ, ಸಿರಪ್ ಕೂಡಾ ಲಭ್ಯವಿದೆ. ಡೆಂಗ್ಯೂ ಚಿಕಿತ್ಸೆಗೆ ಬಳಸುವ ಮಾತ್ರೆಗಳು ಲಭ್ಯ ಇರುವಂತೆ ಕ್ರಮವಹಿಸಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದೆ.