ಕೆಲವು ತಿಂಗಳಿಂದ ಸಾರ್ವಜನಿಕರ ನೆಮ್ಮದಿ ಕೆಡಿಸಿದ್ದ ಕಳ್ಳರು ಕೊನೆಗೂ ಸಿಕ್ಕಿಬಿದ್ದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಜರುಗಿದೆ.
ಅಲ್ಲದೇ ಕಳ್ಳರನ್ನು ಕೈಯಾರೆ ಹಿಡಿದು ಗ್ರಾಮಸ್ಥರು ಕೂಡಿ ಹಾಕಿ ಪೊಲೀಸರ ವಶಕ್ಕೆ ನೀಡಿ ತಕ್ಕ ಪಾಠ ಕಲಿಸಿದ್ದಾರೆ.
ಹಮ್ಮಿಗಿ ಗ್ರಾಮದಲ್ಲಿ ಕೆಲವು ತಿಂಗಳಿಂದ ಕಳ್ಳತನ ನಿರಂತವಾಗಿ ನಡೆಯುತ್ತಿತ್ತು. ರೈತರ ಟ್ರ್ಯಾಕ್ಟರ್ ಸಾಮಗ್ರಿ, ಮೋಟರ್, ಪಂಪ್ ಸೆಟ್ ಕಳವಾಗುತ್ತಿದ್ದವು. ಮಾತ್ರವಲ್ಲ ಮೇಕೆ, ಕುರಿಗಳನ್ನೂ ಕಳ್ಳರು ಹೊತ್ತೊಯ್ಯುತ್ತಿದ್ದರು. ಇದು ಗ್ರಾಮಸ್ಥರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಮುಂಡರಗಿ ಪೊಲೀಸ್ ಠಾಣೆಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಕಳವು ಪ್ರಕರಣ ನಿಯಂತ್ರಣಕ್ಕೆ ಬಂದಿರಲಿಲ್ಲ.
ಪ್ರತಿ ಬಾರಿಯೂ ತಪ್ಪಿಸಿಕೊಳ್ಳುತ್ತಿದ್ದ ಕಳ್ಳರ ಅದೃಷ್ಟ ಶನಿವಾರ ಕೈಕೊಟ್ಟಿತ್ತು. ಎಂದಿನಂತರ ಕಳ್ಳತನಕ್ಕೆ ಇಳಿದ ಗ್ಯಾಂಗ್ ಅನ್ನು ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಹಿಡಿದು ಗ್ರಾಮ ಪಂಚಾಯತ್ನಲ್ಲಿ ಕೂಡಿ ಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದರು. ಮುಂಡರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತನಿಖೆ ನಡೆಲಾಗುತ್ತಿದೆ. ʼʼಗ್ರಾಮದಲ್ಲಿ ಕೆಲವು ತಿಂಗಳಿಂದ ನಿರಂತರ ಕಳ್ಳತನ ನಡೆಯುತ್ತಿತ್ತು. ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇದೀಗಕಳ್ಳರ ಗ್ಯಾಂಗ್ ಸಿಕ್ಕಿ ಬಿದ್ದಿದೆ. ಅವರನ್ನು ರೆಡ್ ಹ್ಯಾಂಡಾಗಿ ಹಿಡಿದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೂಡಿ ಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದೇವೆʼʼ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.