ಗದಗ ಜಿಲ್ಲೆಯಲ್ಲಿ ಡೆಂಘೀ ಗೆ ಮೊದಲ ಬಲಿಯಾಗಿದ್ದು, ಡೆಂಗ್ಯೂನಿಂದ ಶಿರುಂಜ ಗ್ರಾಮದ 5 ವರ್ಷದ ಬಾಲಕ ಚಿರಾಯಿ ಹೊಸಮನಿ ಸಾವನ್ನಪ್ಪಿದ್ದಾನೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಿರಾಯಿ ಹೊಸಮನಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದಿನ ದಿನಕ್ಕೂ ಹೆಚ್ಚಾಗ್ತಿರೋ ಡೆಂಗ್ಯೂ ತಡೆಗೆ ಗದಗ ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗ್ತಿದೆ. ಡೆಂಘೀ ಹರಡುವ ಪ್ರದೇಶಗಳಲ್ಲಿ ಲಾರ್ವಾ ಸರ್ವೇ ಮಾಡಲಾಗ್ತಿದೆ. ಲಾರ್ವಾ ನಾಶಕ್ಕೆ ನೀರಿನ ಟ್ಯಾಂಕ್ ಗಳಿಗೆ ಗಪ್ಪಿ, ಗಾಂಬೂಸಿಯಾ ಮೀನುಗಳನ್ನ ಬಿಡಲಾಗ್ತಾಯಿದೆ. ಕೆರೆಗಳು, ಮನೆ ಮನೆಗಳಲ್ಲಿ ತೆರೆದ ನೀರಿನ ಟ್ಯಾಂಕ್ಗಳಿಗೂ ಮೀನು ಬಿಡಲಾಗ್ತಿದೆ. ಆ ಮೂಲಕ ಡೆಂಘೀ ತಡೆಗೆ ಆರೋಗ್ಯ ಇಲಾಖೆ ಮುಂದಾಗಿದೆ.