ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರ,ರಾಮಚಂದ್ರಪುರ ಮಾರ್ಕಟ್ ಸರ್ಕಲ್ ಬಳಿ ಮಾಜಿ ಮಹಾನಗರ ಪಾಲಿಕೆ ಚಕ್ರವರ್ತಿ ರವರ ಹುಟ್ಟುಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಾಟ್ ಬಾಕ್ಸ್ ಮತ್ತು ಆಟೋ ಚಾಲಕರಿಗೆ ಸಮವಸ್ತ್ರ ವಿತರಣಾ ಸಮಾರಂಭ.
ಶಾಸಕರಾದ ದಿನೇಶ್ ಗುಂಡೂರಾವ್ ರವರು, ಬೆಂಗಳೂರುನಗರ ಕೇಂದ್ರ ಜಿಲ್ಲಾ ಕಾಂಗ್ರೆಸ್ ಎಸ್.ಸಿ.ವಿಭಾಗದ ಅಧ್ಯಕ್ಷರಾದ ಎ.ಪಿ.ಎಸ್.ರಾಜ್ ಕಾರ್ತಿಕ್ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸರವಣ, ಮಾಜಿ ಪಾಲಿಕೆ ಸದಸ್ಯೆ ಕ್ಲೀನ್ ಎಲಿಜಬತ್ ರವರು ಫಲಾನುಭವಿಗಳಿಗೆ ವಿತರಿಸಿದರು.
ದಿನೇಶ್ ಗುಂಡೂರಾವ್ ರವರು ಮಾತನಾಡಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಧರ್ಮ ಮತ್ತು ವರ್ಗದ ಜನರು ವಾಸವಿದ್ದಾರೆ. ಕಾಂಗ್ರೆಸ್ ಪಕ್ಷ ಮೂರು ಯೋಜನೆಗಳನ್ನು ಜನರ ಪರ ಘೋಷಣೆ ಮಾಡಲಾಗಿದೆ.
ಪೆಟ್ರೋಲ್, ಡೀಸಲ್, ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಜನರ ಜೀವನ ಸಾಗಿಸುವುದು ಕಷ್ಟವಾಗಿದೆ.ಜನರ ಜೀವನ ಸುಧಾರಣೆ, ಅವರ ಜೀವನ ನಿರ್ವಹಣೆಗಾಗಿ ಕಾಂಗ್ರೆಸ್ ಕಟಿಬದ್ದವಾಗಿ ದುಡಿಯುತ್ತಿದೆ.
ಈ ನಿಟ್ಟಿನಲ್ಲಿ ಮನೆಯ ಯಾಜಮಾನಿಗೆ ಅಕೌಂಟ್ 2000ಖಾತೆಗೆ ಜಮಾ ಮತ್ತು 200ಯೂನಿಟ್ ವಿದ್ಯುತ್ ಉಚಿತ ಹಾಗೂ ಪ್ರತಿ ವ್ಯಕ್ತಿಗೆ 10ಕೆ.ಜಿ.ಅಕ್ಕಿ ವಿತರಿಸುವ ಯೋಜನೆ ರೂಪಿಸಲಾಗಿದೆ..
ಕಾಂಗ್ರೆಸ್ ಜನರ ಇರುವ ಪಕ್ಷವಾಗಿದೆ.ಜಾತ್ಯತೀತ ಸಿದ್ದಾಂತದಲ್ಲಿ ನಂಬಿಕೆ ಇರುವ ಪಕ್ಷವಾಗಿದೆ ಎಂದು ಹೇಳಿದರು.ರಾಜ್ ಕಾರ್ತಿಕ್ ರವರು ಮಾತನಾಡಿ ಬಡವರ ಕಣ್ಣಿರು ಒರೆಸುವ, ಅವರ ಕೈ ಹಿಡಿದು ನಡೆಸುವ ಕೆಲಸವಾಗಬೇಕು.
ನಮ್ಮ ಪ್ರದೇಶದಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಸಹಾಯ ಹಸ್ತ ನೀಡಲಾಗುತ್ತಿದೆ.ಕಾಂಗ್ರೆಸ್ ಪಕ್ಷ ಬಡವರ ಪರ ಹೋರಾಟ ಮಾಡುವ ಪಕ್ಷವಾಗಿದೆ ಎಂದು ಹೇಳಿದರು.
ಈ ವೇಳೆ ಪುಷ್ಪ, ಶ್ರೀಕಾಂತ್ ರವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಸಂಪತ್,ಜಿ.ಭಾಸ್ಕರ್, ಮುರುಗ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.