ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಪಾಯಲ್ ರಜಪೂತ್ ತೆಲುಗಿನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿನಿಮಾವೊಂದರ ಸಂದರ್ಶನವೊಂದರಲ್ಲಿ ಭಾಗಿಯಾದ ನಟಿ ಪ್ರಭಾಸ್ಗಾಗಿ ಏನು ಬೇಕಾದ್ರೂ ಮಾಡ್ತೀನಿ ಎಂದು ಹೇಳಿದ್ದಾರೆ.
ಚಿತ್ರರಂಗದ ನೆಚ್ಚಿನ ನಟ, ನಟಿಯರ ಬಗ್ಗೆ ಮಾತನಾಡಿದ ಪಾಯಲ್, ಇಲಿಯಾನಾ ಮತ್ತು ಅನುಷ್ಕಾ ಶೆಟ್ಟಿ ಎಂದರೆ ನನಗೆ ತುಂಬಾ ಇಷ್ಟ ಎಂದಿದ್ದಾರೆ. ಅಲ್ಲದೇ, ಪವನ್ ಕಲ್ಯಾಣ್ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತೇನೆ. ಅವಕಾಶ ಸಿಕ್ಕರೆ ಮಹೇಶ್ ಬಾಬು, ಪ್ರಭಾಸ್ ಚಿತ್ರಗಳಲ್ಲಿ ನಟಿಸುವ ಆಸೆಯಿದೆ. ಪ್ರಭಾಸ್ ನನ್ನ ನೆಚ್ಚಿನ ವ್ಯಕ್ತಿ ಎಂದಿದ್ದಾರೆ.
ಇನ್ನೂ ಪ್ರಭಾಸ್ಗೆ ನಾನು ಅಡುಗೆ ಮಾಡಿ ಬಡಿಸಲು ಇಷ್ಟಪಡುತ್ತೇನೆ. ಅಷ್ಟೇ ಅಲ್ಲ, ಅವರು ಏನು ಕೇಳುತ್ತಾರೋ ಅದನ್ನು ಮಾಡಿ ಕೊಡಲು ಸಿದ್ಧ ಎಂದಿದ್ದಾರೆ. ನನಗೆ ರಾಜ್ಮಾ ರೈಸ್ ತುಂಬಾ ಇಷ್ಟ. ಅದನ್ನು ವಿಶೇಷವಾಗಿ ಅಡುಗೆ ಮಾಡಿ ಪ್ರಭಾಸ್ಗೆ ನನ್ನ ಕೈಯಿಂದ ತಿನ್ನಿಸಲು ಬಯಸುತ್ತೇನೆ. ಅಂತಹ ಅವಕಾಶ ಬಂದರೆ ನಾನು ಅದನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಪಾಯಲ್ ಇತ್ತೀಚೆಗೆ ತೆರೆಕಂಡ ‘ರಕ್ಷಣಾ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಿ ಸಿನಿಮಾ ಸದ್ದು ಮಾಡುತ್ತಿದೆ.