ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆ ಖಂಡಿತವಾಗಿಯೂ ನಡೆಯಲಿದೆ ಮತ್ತು ವಿಕ್ರಮ್ ಸಿಂಘೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಯುನೈಟೆಡ್ ನ್ಯಾಷನಲ್ ಪಾರ್ಟಿಯ ಉಪಾಧ್ಯಕ್ಷ ರುವಾನ್ ವಿಜೆವರ್ಧನ್ ಖಚಿತಪಡಿಸಿದ್ದಾರೆ.
ಚುನಾವಣಾ ಆಯೋಗ ಜುಲೈ 17ರ ಬಳಿಕ ಅಧ್ಯಕ್ಷೀಯ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸುವ ನಿರೀಕ್ಷೆಯಿದೆ.
ಶ್ರೀಲಂಕಾ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಬಲ್ಲ ಸಾಮರ್ಥ್ಯವುಳ್ಳ ಏಕೈಕ ನಾಯಕ ವಿಕ್ರಮ್ ಸಿಂಘೆ. ಅವರು ತಮ್ಮ ಕೆಲಸದಿಂದ ಅದನ್ನು ಸಾಭೀತುಪಡಿಸಿದ್ದಾರೆ ಎಂದು ರುವಾನ್ ಹೇಳಿದ್ದಾರೆ. ವಿಕ್ರಮ್ ಸೀಂಘೆ ಜುಲೈ 2022ರಲ್ಲಿ ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.