ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಝಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಸೋನಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಸೋನಾಕ್ಷಿ ಗರ್ಭಿಣಿಯಾಗಿದ್ದಾರೆ. ಇದೇ ಕಾರಣಕ್ಕೆ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಈ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದು ಮದುವೆ ಆದವರು ಗರ್ಭಿಣಿಯಾದರೆ ಮಾತ್ರ ಆಸ್ಪತ್ರೆಗೆ ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ.
ಮದುವೆಯಾದ ಬಳಿಕ ನಾವು ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಜನರು ನಾನು ಗರ್ಭಿಣಿ ಎಂದು ಭಾವಿಸುತ್ತಾರೆ ಎಂದು ನಟಿ ಸೋನಾಕ್ಷಿ ಸಿನ್ಹಾ ಇನ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.
ಮದುವೆಯ ಫೋಟೋಗಳನ್ನು ಆನ್ಲೈನ್ನಲ್ಲಿ ಹಂಚಿಕೊಂಡಿರುವ ನಟಿ, ಏಳು ವರ್ಷಗಳ ಹಿಂದೆ 2017ರ ಜೂನ್ 23ರಂದು ಇದೇ ದಿನ ನಾವು ಪರಸ್ಪರರ ಕಣ್ಣುಗಳಲ್ಲಿ ಪ್ರೀತಿಯನ್ನು ಅದರ ಶುದ್ಧ ರೂಪದಲ್ಲಿ ನೋಡಿದ್ದೇವೆ ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವೆ. ಇಂದು ಆ ಪ್ರೀತಿ ನಮಗೆ ಮಾರ್ಗದರ್ಶನ ನೀಡಿದೆ. ಎಲ್ಲಾ ಸವಾಲುಗಳು ಮತ್ತು ವಿಜಯಗಳ ಮೂಲಕ… ಈ ಕ್ಷಣದವರೆಗೆ ಮುನ್ನಡೆಸುತ್ತದೆ… ಅಲ್ಲಿ ನಮ್ಮ ಕುಟುಂಬಗಳು ಮತ್ತು ನಮ್ಮ ಎರಡೂ ದೇವರುಗಳ ಆಶೀರ್ವಾದದೊಂದಿಗೆ… ನಾವು ಪತಿ ಪತ್ನಿಯಾಗಿದ್ದೇವೆ. ಇಲ್ಲಿಯವರೆಗೆ ಪರಸ್ಪರ ಪ್ರೀತಿ, ಭರವಸೆ ಮತ್ತು ಎಲ್ಲವೂ ಸುಂದರವಾಗಿತ್ತು ಎಂದು ನಟಿ ಸೋನಾಕ್ಷಿ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಸೋನಾಕ್ಷಿ ಮತ್ತು ಜಹೀರ್ ತಮ್ಮ ಮದುವೆಯ ಉಡುಪನ್ನು ಧರಿಸಿ ಪೋಸ್ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡ ನಟಿ, ದೇವತೆಗಳು ನಮ್ಮನ್ನು ನೋಡುತ್ತಿದ್ದಾರೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ,
ತಾವು ಗರ್ಭಿಣಿ ಎನ್ನುವ ಕುರಿತು ವದಂತಿಗಳ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಸೂಕ್ಷ್ಮವಾಗಿ ಗೇಲಿ ಮಾಡಿದ ಅವರು, ಜನರು ತಾನು ಗರ್ಭಿಣಿ ಎಂದು ಭಾವಿಸುವ ಕಾರಣ ಈಗ ಆಸ್ಪತ್ರೆಗೆ ಹೋಗಲು ಸಹ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮದುವೆಯಾದ ಬಳಿಕ ಆದ ಒಂದೇ ಬದಲಾವಣೆಯೆಂದರೆ ಈಗ ನಾವು ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಮನೆಯಿಂದ ಹೊರಬಂದ ತಕ್ಷಣ ಜನರು ಯೋಚಿಸುತ್ತಾರೆ. ನಾನು ಗರ್ಭಿಣಿಯಾಗಿದ್ದೇನೆ ಎಂದುಕೊಳ್ಳುತ್ತಾರೆ ಎಂದು ಸೋನಾಕ್ಷಿ ತಿಳಿಸಿದ್ದಾರೆ.