ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಅವರು 47 ಎಸೆತಗಳಲ್ಲಿ 100 ರನ್ ಗಳಿಸಿ ಶತಕ ಸಿಡಿಸಿದ್ದಾರೆ ಈ ಮೂಲಕ ಹಲವು ದಾಖಲೆ ಮುರಿದಿದ್ದಾರೆ.
ಎಡಗೈ ಬ್ಯಾಟರ್ ಏಳು ಬೌಂಡರಿ ಮತ್ತು ಎಂಟು ಸಿಕ್ಸರ್ ಗಳನ್ನು ಬಾರಿಸಿದ್ದರು. ೨೦೦ ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಸ್ಕೋರ್ ಮಾಡಿದ್ದಾರೆ. ಈ ವೇಳೆ ಅವರು ಈ ಹಿಂದೆ ವಿಶ್ವ ಕ್ರಿಕೆಟ್ನಲ್ಲಿ ದಾಖಲಾಗಿದ್ದ ಕೆಲವು ಅತ್ಯುತ್ತಮ ಹಲವಾರು ದಾಖಲೆಗಳನ್ನು ಮುರಿದರು.
ಬಳಿಕ ಜಿಂಬಾಬ್ವೆಯನ್ನು 134 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ಅಂತಿಮವಾಗಿ 100 ರನ್ಗಳಿಂದ ಗೆದ್ದುಕೊಂಡಿತು. ಭಾರತದ ಪರ ಮುಕೇಶ್ ಕುಮಾರ್ 3, ಅವೇಶ್ ಖಾನ್ 3, ರವಿ ಬಿಷ್ಣೋಯ್ 2 ವಿಕೆಟ್ ಪಡೆದರು. ಎರಡನೇ ಟಿ 20 ಯಲ್ಲಿ ಭಾರತದ ಪ್ರದರ್ಶನವು ಮೊದಲ ಟಿ 20 ಐ ಸೋಲಿನ ಎಲ್ಲಾ ನೋವನ್ನು ಕಳೆಯಿತು. ಮೂರು ಪಂದ್ಯಗಳು ಬಾಕಿ ಇರುವಾಗ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಉಳಿದ ಮೂರು ಪಂದ್ಯಗಳು ಬುಧವಾರ, ಶನಿವಾರ ಮತ್ತು ಭಾನುವಾರ ನಡೆಯಲಿವೆ.
ರೋಹಿತ್ ಶರ್ಮಾರನ್ನು ಹಿಂದಿಕ್ಕಿದ ಅಭಿಷೇಕ್ ಶರ್ಮಾ: ಯುವ ಆಟಗಾರ ಈ ಋತುವಿನ 47 ನೇ ಸಿಕ್ಸರ್ ಬಾರಿಸುವ ಮೂಲಕ 2024 ರಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು
ಯುವ ಆರಂಭಿಕ ಬ್ಯಾಟರ್ ಹ್ಯಾಟ್ರಿಕ್ ಸಿಕ್ಸರ್ಗಳೊಂದಿಗೆ ತಮ್ಮ ಮೊದಲ ಟಿ 20 ಐ ಶತಕ ಪೂರ್ಣಗೊಳಿಸಿದರು. ಇದರೊಂದಿಗೆ ಅವರು ಅಂತಾ ರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಸತತ 3 ಸಿಕ್ಸರ್ಗಳೊಂದಿಗೆ ಶತಕ ತಂದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು