ಒಡಿಶಾ:- ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಉಂಟಾಗಿ ಭಕ್ತ ಸಾವನ್ಮಪ್ಪಿದ್ದು, 300 ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಜರುಗಿದೆ.
ಇನ್ನು ಮೃತ ಭಕ್ತ ಯಾರೆಂದು ತಿಳಿದುಬಂದಿಲ್ಲ. ಸದ್ಯ ಗಾಯಾಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಂದಿನಿಂದ ಎರಡು ದಿನ ನಡೆಯುವ ಭಗವಾನ್ ಜಗನ್ನಾಥ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ.
300ಕ್ಕೂ ಹೆಚ್ಚು ವ್ಯಕ್ತಿಗಳನ್ನು ಪುರಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಸುಮಾರು 50 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಭಗವಾನ್ ಜಗನ್ನಾಥನ ಭವ್ಯ ರಥಯಾತ್ರೆ ಭಾನುವಾರ ಆರಂಭಗೊಂಡಿದ್ದು, ಪದಿ ಮುರ್ಮು ಅವರು ಚಾಲನೆ ನೀಡಿದ್ದಾರೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುವ ಮೂಲಕ ಈ ಯಾತ್ರೆಗೆ ಸಾಕ್ಷಿಯಾಗುತ್ತಾರೆ. ಈ ರಥಯಾತ್ರೆಯೂ ಎರಡು ದಿನ ನಡೆಯಲಿದ್ದು, 53 ವರ್ಷಗಳ ಬಳಿಕ ಮೊದಲ ಬಾರಿಗೆ ರಥಯಾತ್ರೆಯು ಎರಡು ದಿನಗಳವರೆಗೆ ನಡೆಯುತ್ತಿರುವುದು ವಿಶೇಷ. ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರಾ ರಥಗಳನ್ನು ‘ಜೈ ಜಗನ್ನಾಥ’ ಘೋಷಣೆಯೊಂದಿಗೆ ಕಂಸಾಳೆ, ಶಂಖಗಳ ಶಬ್ದವು ಮೊಳಗಿದೆ.