ವೆಲ್ಲಿಂಗ್ಟನ್: ನ್ಯೂಜಿಲೆಂಡ್ನ ಉತ್ತರ ಭಾಗದಲ್ಲಿರುವ ಕೆರ್ಮಾಡೆಕ್ ದ್ವೀಪಗಳ ಪ್ರದೇಶದಲ್ಲಿ ಇಂದು ಬೆಳಗ್ಗೆ 7.1 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದ್ದು, ಭೂಕಂಪ ಭೂಮಿಯಿಂದ 10 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
ಭಾರೀ ಭೂಕಂಪ ಉಂಟಾದ ತಕ್ಷಣ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪ ಸಂಭವಿಸಿದ 300 ಕಿಮೀ ವ್ಯಾಪ್ತಿಯ ಪ್ರದೇಶದೊಳಗೆ ಸುನಾಮಿಯ ಭೀತಿಯಿದೆ. ಸದ್ಯ ಈ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಭೂಕಂಪದ ಬಳಿಕ ರಾಷ್ಟ್ರೀಯ ತುರ್ತು ನಿರ್ವಹಣಾ ಏಜೆನ್ಸಿ ನ್ಯೂಜಿಲೆಂಡ್ಗೆ ಯಾವುದೇ ಸುನಾಮಿಯ ಭೀತಿ ಇಲ್ಲ ಎಂದು ತಿಳಿಸಿದೆ.
ಪೆಸಿಫಿಕ್ ಪ್ಲೇಟ್ ಮತ್ತು ಆಸ್ಟ್ರೇಲಿಯನ್ ಪ್ಲೇಟ್ ಒಟ್ಟುಗೂಡುವ ಪ್ರದೇಶದಲ್ಲಿ ಭಾರೀ ಭೂಕಂಪಗಳು ಸಂಭವಿಸುತ್ತದೆ. ಈ ಪ್ರದೇಶ ರಿಂಗ್ ಆಫ್ ಫೈರ್ಗೆ ಅತ್ಯಂತ ಸಮೀಪವಿದೆ ಮಾತ್ರವಲ್ಲದೇ ಈ ಪ್ರದೇಶದಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ವಾರ್ಷಿಕವಾಗಿ ನ್ಯೂಜಿಲೆಂಡ್ನಲ್ಲಿ ಸಾವಿರಾರು ಭೂಕಂಪಗಳು ನಡೆಯುತ್ತಿರುತ್ತವೆ.