ಮುಂಬೈನಲ್ಲಿ ಸುರಿದ ಭೀಕರ ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿದೆ.
ನಗರದಲ್ಲಿ ರಾತ್ರಿಯಿಡೀ ಭಾರಿ ಮಳೆಯಾಗಿದ್ದು ನಗರದ ಜನರ ಜೀವನ ಅಸ್ತವ್ಯಸ್ತಗೊಂಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜುಲೈ 8 ರ ಸೋಮವಾರ ಮುಂಬೈನಲ್ಲಿ ದಿನವಿಡೀ ಭಾರಿ ಮಳೆ ಬರುವ ಸಾಧ್ಯತೆಗಳಿವೆ. ಮೇಘಸ್ಪೋಟವೂ ಸಂಭವಿಸಬಹುದು ಎಂದು ಹೇಳಲಾಗಿದೆ. ಹೀಗಾಗಿ ಪ್ರವಾಹದ ಸಮಸ್ಯೆ ಮುಂದುವರಿಯಲಿದೆ
ಭಾರೀ ಮಳೆಯಿಂದ ಕಲ್ಯಾಣ್-ಕಸರಾ ವಿಭಾಗದಲ್ಲಿ ಖಡವ್ಲಿ ಮತ್ತು ಟಿಟ್ವಾಲಾ ನಡುವಿನ ಸ್ಥಳೀಯ ರೈಲು ಸೇವೆಗಳಿಗೆ ಅಡ್ಡಿಯಾಗಿದೆ.
ನಿನ್ನೆ , ಗುಡುಗು ಮತ್ತು ಮಳೆಯಿಂದಾಗಿ ರೈಲು ಹಳಿಗಳ ಮೇಲೆ ಮರ ಬಿದ್ದ ಕಾರಣ ಕಸರಾ ಮತ್ತು ಟಿಟ್ವಾಲಾ ನಿಲ್ದಾಣಗಳ ನಡುವಿನ ಸ್ಥಳೀಯ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಇದಲ್ಲದೆ, ಭಾನುವಾರ ಅಟ್ಗಾಂವ್ ಮತ್ತು ಥಾನ್ಸಿಟ್ ನಿಲ್ದಾಣಗಳ ನಡುವಿನ ಹಳಿಗಳ ಮೇಲೆ ಮಣ್ಣು ಬಿದ್ದಿತ್ತು. ವಶಿಂಡ್ ನಿಲ್ದಾಣದ ಸಮೀಪ ಹಳಿಗಳ ಮೇಲೆ ಮರ ಬಿದ್ದು, ಅತ್ಯಂತ ಜನನಿಬಿಡ ಪ್ರದೇಶಗಳ ರೈಲು ಸೇವೆಗಳಿಗೆ
ಅಡ್ಡಿಯಾಯಿತು. ಸೋಮವಾರದಿಂದ ಈ ಮಾರ್ಗಗಳಲ್ಲಿ ರೈಲು ಸೇವೆಗಳು ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಆದರೆ, ಮಳೆ ನಿಲ್ಲದಿದ್ದರೆ ಸಮಸ್ಯೆ ಮುಂದುವರಿಬಹುದು.
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಕೇಂದ್ರ ರೈಲ್ವೆ ಉಪನಗರ ಸೇವೆಗಳ ಮೇಲೆ ಪರಿಣಾಮ ಬೀರಿದೆ, ಸೋಮವಾರ ಬೆಳಿಗ್ಗೆ ನಿಲ್ದಾಣಗಳು ಮತ್ತು ಹಳಿಗಳು ಜಲಾವೃತಗೊಂಡಿವೆ. ಸಿಯಾನ್ ಮತ್ತು ಭಾಂಡೂಪ್ ಮತ್ತು ನಹೂರ್ ನಿಲ್ದಾಣಗಳ ನಡುವೆ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ