ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿ ಆಗಮನವಾಗಿದೆ. ಒಂಬತ್ತು ವರ್ಷದ ರೀಟಾ ಎಂಬ ಹೆಣ್ಣಾನೆ ಮರಿಯಾನೆಗೆ ಜನ್ಮ ನೀಡಿದೆ.
ಆನೆ ಮರಿ ಜನನದಿಂದ ಜೈವಿಕ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ. ಸಫಾರಿಯ ಸೀಗೆಕಟ್ಟೆಯಲ್ಲಿ ಮರಿಯಾನೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಮರಿಯೊಂದಕ್ಕೆ ರೀಟಾ ಜನ್ಮ ನೀಡಿದೆ. ಪಶುವೈದ್ಯರ ಮತ್ತು ಸಿಬ್ಬಂದಿಗಳು ಆರೈಕೆಯಲ್ಲಿ ತಾಯಿ ಹಾಗೂ ಮರಿಯಾನೆ ಆರೋಗ್ಯವಾಗಿದೆ. ಮರಿಯಾನೆ ಜನನದಿಂದ ಆನೆಗಳ ಸಂಖ್ಯೆ ಏರಿಕೆ ಆಗಿದೆ
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 27 ಕ್ಕೇರಿದೆ 27 ಆನೆಗಳ ಪೈಕಿ 12 ಗಂಡು ಮತ್ತು 15 ಹೆಣ್ಣಾನೆಗಳಿವೆ.
ಮರಿಯಾನೆಯನ್ನ ಪ್ರೀತಿಯಿಂದ ಹಾಗೂ ರಕ್ಷಣಾತ್ಮಕವಾಗಿ ಇತರೆ ಆನೆಗಳು ನೋಡಿಕೊಳ್ಳುತ್ತಿವೆ. ಆನೆಗಳ ಹಿಂಡಿನ ಜೊತೆಗೆ ಪುಟಾಣಿ ಮರಿಯಾನೆ ಸ್ವಚ್ಛಂದ ಓಡಾಟ ಮಾಡುತ್ತಿದೆ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ತನ್ನ ಮುದ್ದಾದ ಸೊಂಡಲಿನಿಂದ ಎಲ್ಲರನ್ನು ಮರಿಯಾನೆ ಆಕರ್ಷಿಸುತ್ತಿದೆ.