ಮಾನ್ಸೂನ್ ಮಾರುತಗಳು ದಕ್ಷಿಣದಿಂದ ನಮ್ಮ ರಾಜ್ಯಕ್ಕೆ ಆಗಮಿಸುವ ಜೊತೆಗೇ ಮಳೆಗಾಲ ಆರಂಭವಾದ ಸೂಚನೆ ದೊರಕುತ್ತದೆ. ಅಟ್ಟದ ಮೇಲಿಟ್ಟಿದ್ದ ಕೊಡೆಗಳೆಲ್ಲಾ ಈಗ ಹೊರಬರತೊಡಗುತ್ತವೆ.
ಈ ಋತುವಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಏರುಪೇರುಗಳಾಗುವುದು ಸಾಮಾನ್ಯವಾಗಿರುತ್ತದೆ.
ಇದು ನೆಗಡಿಯಿಂದ ಹಿಡಿದು ಜೀರ್ಣಕ್ರಿಯೆಗಳವರೆಗೆ ಹಲವಾರು ತೊಂದರೆಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ ಮಳೆಗಾಲದ ಇಂತಹ ಸಮಸ್ಯೆಗಳಿಂದ ದೇಹವನ್ನು ನೈಸರ್ಗಿಕ ರೀತಿಯಿಂದ ಹೇಗೆ ಕಾಳಜಿವಹಿಸುವುದು ಉತ್ತಮ
ಇಂತಹ ನೈಸರ್ಗಿಕ ರೋಗನಿವಾರಕಗಳಲ್ಲಿ ತುಳಸಿ ಕಷಾಯವೂ ಒಂದು. ಹಿಂದುಗಳಿಗಳಲ್ಲಿ ಪವಿತ್ರವೆಂದು ಪೂಜಿಸಲ್ಪಡುವ ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು ಅತ್ಯಂತ ಪ್ರಯೋಜನ!
ನಮ್ಮಲ್ಲಿ ತುಳಸಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ರೋಗ ನಿರೋಧಕಗಳನ್ನು ಹೆಚ್ಚಿಸುವಂತಹ ಗುಣಗಳಿಂದಾಗಿ ಆಯುರ್ವೇದದಲ್ಲಿ ತುಳಸಿಗೆ ವಿಶಿಷ್ಟ ಸ್ಥಾನವಿದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳು ಮತ್ತು ವೈರಸ್ ಗಳಿಗೆ ನಮ್ಮ ದೇಹವು ಒಡ್ಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ . ಇಂತಹ ಸಮಯದಲ್ಲಿ ರೋಗ ನಿರೋಧಕ ಶಕ್ತಿಗಳು ಕುಗ್ಗಬಹುದು.
ಅದಕ್ಕಾಗಿ ತುಳಸಿ ಖಾಡಾ ಅಥವ ಕಷಾಯವು ನೈಸರ್ಗಿಕ ವರ್ಧಕವಾಗಿ ಕೆಲಸ ಮಾಡಬಲ್ಲದು. ಅಲ್ಲದೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗುವಂತೆ ಮಾಡಿ ಸೋಂಕಿನಿಂದ ದೂರವಿರಲು ಸಹಾಯಮಾಡುತ್ತದೆ. ಜರ್ನಲ್ ಆಫ್ ಎಥ್ನೋಫಾರ್ಮಕಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ತುಳಸಿಯು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ತುಳಸಿಯು ಉಸಿರಾಟದ ಸೋಂಕುಗಳಿಗೆ ಕಾರಣವಾದ ವಿವಿಧ ರೋಗಕಾರಕಗಳನ್ನು ಎದುರಿಸಬಲ್ಲ ಶಕ್ತಿಯನ್ನು ಹೊಂದಿದೆ.
ಮಾನ್ಸೂನಿನಲ್ಲಿ ಗಾಳಿಯು ತೇವಾಂಶದಿಂದ ಕೂಡಿದ್ದು, ಇದು ಕೆಮ್ಮು ಶೀತ ಮತ್ತು ಸೈನಸ್ ನಂತಹ ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು. ಇದಕ್ಕೆ ನೈಸರ್ಗಿಕ ಪರಿಹಾರವಾಗಿ ತುಳಿಸಿ ಕಷಾಯ ಉತ್ತಮವಾಗಿದೆ.
ಮಳೆಗಾಲದಲ್ಲಿನ ಕಲುಷಿತ ಆಹಾರ ಮತ್ತು ನೀರಿನ ಕಾರಣದಿಂದಾಗಿ ಜೀರ್ಣಕಾರಿ ಸಮಸ್ಯೆಗಳಿಗೆ ತೊಂದರೆಯುಂಟಾಗುತ್ತದೆ.