ದಕ್ಷಿಣ ಚಿತ್ರರಂಗದ ಖ್ಯಾತ ನಟ ಶರತ್ ಕುಮಾರ್ ಪುತ್ರಿ ಸ್ಟಾರ್ ಬ್ಯೂಟಿ ವರಲಕ್ಷ್ಮಿ ಶರತ್ಕುಮಾರ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅದ್ಧೂರಿಯಾಗಿ ಹಸೆಮಣೆ ಏರಿ ಬಳಿಕ ಸಖತ್ ಗ್ರ್ಯಾಂಡ್ ಆಗಿ ರಿಸೆಪ್ಶನ್ ಮಾಡಿಕೊಂಡಿದ್ದ ಜೋಡಿ ಇದೀಗ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ಈ ವೇಳೆ ಪತಿಯೊಂದಿಗೆ ಸೆಲ್ಫಿ ತೆಗೆದುಕೊಂಡ ನಟಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಟಿ ವರಲಕ್ಷ್ಮಿ ಶರತ್ಕುಮಾರ್ ಪತಿ ನಿಕೊಲಾಯ್ ಸಚ್ದೇವ್ ಅವರೊಂದಿಗೆ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ.ಸದ್ಯ ನಟಿ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲಾ ತಾಣದಲ್ಲಿ ಸದ್ದು ಮಾಡುತ್ತಿದೆ. ನವ ದಂಪತಿಗಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ನಟ ಶರತ್ಕುಮಾರ್ ಅವರ ಪುತ್ರಿ ವರಲಕ್ಷ್ಮಿ ತಮಿಳು ಚಿತ್ರರಂಗದ ಜನಪ್ರಿಯ ನಟಿ. ಅವರು ಕೆಲವು ಚಿತ್ರಗಳಲ್ಲಿ ತಮ್ಮ ವಿಶೇಷ ಪಾತ್ರಕ್ಕಾಗಿ ಗಮನ ಸೆಳೆದರು. ಪೋಷಕ ನಟಿಯಾಗಿ, ಹೀರೋಯಿನ್ ಆಗಿಯೂ ಅವರು ಗಮನ ಸೆಳೆದಿದ್ದಾರೆ.
ವರಲಕ್ಷ್ಮಿ ಅವರು ನಟ ವಿಶಾಲ್ ಅವರೊಂದಿಗೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ವರಲಕ್ಷ್ಮಿ ಅವರು ಮುಂಬೈ ಮೂಲದ ನಿಕೊಲಾಯ್ ಸಚ್ದೇವ್ ಎಂಬ ಉದ್ಯಮಿಯನ್ನು ಪ್ರೀತಿಸುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ನಿಶ್ಚಿತಾರ್ಥದ ನಂತರ ವರಲಕ್ಷ್ಮಿ-ನಿಕೊಲಾಯ್ ಫೋಟೋಗಳು ಸಾಮಾಜಿಕ ಜಾಲಾ ತಾಣದಲ್ಲಿ ಸದ್ದು ಮಾಡಿದ್ದು ಸಾಕಷ್ಟು ಮಂದಿ ಟೀಕಿಸಿದ್ದರು.
ತುಂಬಾ ಸರಳವಾಗಿ ಕುಟುಂಬಸ್ಥರು ಆಪ್ತರು ಸಮ್ಮುದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ಮದುವೆ ನಿಶ್ಚಿತಾರ್ಥವಂತೂ ತುಂಬಾ ಅದ್ಧೂರಿಯಾಗಿ ನಡೆದಿತ್ತು. ನಿಶ್ಚಿತಾರ್ಥ ಆಪ್ತರ ಮಧ್ಯೆ ನಡೆದರೂ ರಿಸೆಪ್ಶನ್ ಅದ್ಧೂರಿಯಾಗಿದ್ದು ಚಿತ್ರರಂಗದ ಗಣ್ಯರೂ ಬಂದಿದ್ದರು.
ವರಲಕ್ಷ್ಮಿ 2012 ರಲ್ಲಿ ‘ಬೋಡಾ ಬೋಡಿ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಚೆಗಷ್ಟೇ ವರಲಕ್ಷ್ಮಿ ಶರತ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಆರತಕ್ಷತೆ ಸಮಾರಂಭ ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಸಮಾರಂಭದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು. ನಾಯಕ ಸಿದ್ಧಾರ್ಥ್ ಮತ್ತು ರಜನಿಕಾಂತ್ ಪುತ್ರಿ ಸೌಂದರ್ಯ ಕೂಡ ಬಂದಿದ್ದರು.
ಮದುವೆ ಥಾಯ್ಲೆಂಡ್ನಲ್ಲಿ ನಡೆಯಲಿದ್ದರೆ, ಚೆನ್ನೈನಲ್ಲಿ ಅವರ ಮದುವೆಯ ಆರತಕ್ಷತೆ ನಡೆಯಿತು. ಸುಂದರವಾಗಿ ಆಕರ್ಷಣೀಯವಾಗಿ ರಿಸೆಪ್ಶನ್ ಡೆಕೊರೇಷನ್ ಮಾಡಲಾಗಿತ್ತು. ವರಲಕ್ಷ್ಮಿ ನಿಕೊಲಾಯ್ ಸಚ್ದೇವ್ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಸಚಿವ, ನಟ ಉದಯನಿಧಿ ಸ್ಟಾಲಿನ್ ಉಪಸ್ಥಿತರಿದ್ದರು. ಅವರು ಶರತ್ ಕುಮಾರ್ ಫ್ಯಾಮಿಲಿ ಜೊತೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರೂ ಕೂಡಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಶರತ್ಕುಮಾರ್ ಕುಟುಂಬ ಸಮೇತರಾಗಿ ಹೋಗಿ ಪ್ರಧಾನಿ ಮೋದಿಯವರನ್ನು ಮದುವೆಗೆ ಆಹ್ವಾನಿಸಿದ್ದರು.