ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಕಾರ್ಗೊ (ಸರಕು ಸಾಗಾಟ) ಪ್ರಾರಂಭಿಸಲಾಗಿದೆ. ಸೇವೆ ಲಭ್ಯವಿರುವ ವಿದೇಶಗಳಿಗೆ ಸರಕುಗಳನ್ನು ಕಳುಹಿಸಬಹುದು. ಜುಲೈ 2ರಂದು ಮಂಗಳೂರಿನಿಂದ ಅಬುಧಾಬಿಗೆ 2,522 ಕೆಜಿ ತರಕಾರಿ ಹಾಗೂ ಹಣ್ಣು ಹಂಪಲನ್ನು ಸಾಗಾಟ ಮಾಡುವ ಮೂಲಕ ಮೊದಲ ಅಂತಾರಾಷ್ಟ್ರೀಯ ಕಾರ್ಗೊ ಸಾಗಾಟ ಆರಂಭವಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಕೇರಳ, ಸಹಿತ ನಾನಾ ಭಾಗದಿಂದ ಸರಕನ್ನು ಮಂಗಳೂರು ಏರ್ಪೋರ್ಟ್ ಮೂಲಕ ವಿದೇಶಗಳಿಗೆ ಸಾಗಾಟ ನಡೆಸಬಹುದು. ತರಕಾರಿ, ಹಣ್ಣು ಹಂಪಲು, ಆಹಾರ ವಸ್ತುಗಳು, ಯಂತ್ರೋಪಕರಣದ ಬಿಡಿಭಾಗಗಳು, ಟೆಕ್ಸ್ಟೈಲ್ಸ್, ಮೀನು ಸಹಿತ ನಾನಾ ವಸ್ತುಗಳನ್ನು ಪ್ರಯಾಣಿಕರು ಸಂಚರಿಸುವ ವಿಮಾನದಲ್ಲೇ ಸಾಗಿಸಲಾಗುತ್ತದೆ.
ಇಂಡಿಗೋ ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ದುಬೈ, ದೋಹಾ, ದಮಾಮ್, ಕುವೈಟ್, ಮಸ್ಕತ್, ಅಬುಧಾಬಿ, ಬಹರೈನ್ಗೆ ಕೊಂಡೊಯ್ಯಲು ಅವಕಾಶವಿದೆ. ಸ್ಪೈಸ್ಜೆಟ್ ವಿಮಾನದ ಸಿಬ್ಬಂದಿಯ ಎಡವಟ್ಟಿನಿಂದಾಗಿ 12 ಗಂಟೆಗಳ ಕಾಲ ವಿಮಾನ ಟೇಕ್ಆಫ್ ಆಗದೆಯೇ ಬೆಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ದಿಲ್ಲಿಯಲ್ಲಿಯೇ ವಿಮಾನದೊಳಗೇ ಗಂಟೆಗಟ್ಟಲೆ ಕಾಲ ಕಳೆದ ಘಟನೆ ವರದಿಯಾಗಿದೆ.