ಮುಂಬೈ: ಮುಂಬೈನ ಬೇಲಾಪುರ ನಿಲ್ದಾಣದಲ್ಲಿ ಇಂದು (ಸೋಮವಾರ) ರೈಲಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರು ಜಾರಿ ಬಿದ್ದು, ರೈಲು ಮತ್ತು ಹಳಿಯ ಮಧ್ಯದಲ್ಲಿ ಸಿಲುಕಿದ್ದಾರೆ. ಇದರಿಂದ ಆಕೆಯ ಕಾಲಿಗೆ ತೀವ್ರ ಗಾಯಗಳಾಗಿವೆ. ಒಂದುವೇಳೆ ರೈಲು ಮುಂದೆ ಚಲಿಸಿದ್ದರೆ ಆಕೆಯ ಪ್ರಾಣ ಹೋಗುತ್ತಿತ್ತು. ಆದ್ದರಿಂದ ಆಕೆಯ ಜೀವ ಉಳಿಸಲು ಲೊಕೊ ಪೈಲಟ್ ರೈಲನ್ನು ಹಿಮ್ಮುಖವಾಗಿ ಚಲಿಸಿದ್ದಾರೆ. ಆಗ ಆ ಮಹಿಳೆಯನ್ನು ಹಳಿಯಿಂದ ಮೇಲೆತ್ತಿ ಆಕೆಯ ಜೀವವನ್ನು ಕಾಪಾಡಿರು.
ಮಾಹಿತಿಯ ಪ್ರಕಾರ, ಪನ್ವೇಲ್ನಿಂದ ರೈಲ್ವೆ ಸ್ಟೇಷನ್ಗೆ ಹೋಗುತ್ತಿದ್ದಾಗ ಬೇಲಾಪುರ ಸಿಬಿಡಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರು ಕಾಲು ಜಾರಿ ರೈಲು ಹಳಿ ಮೇಲೆ ಬಿದ್ದಿದ್ದಾರೆ. ಅಷ್ಟರಲ್ಲಿ ರೈಲಿನ ಮೊದಲ ಮಹಿಳಾ ಕೋಚ್ ಆಕೆಯನ್ನು ದಾಟಿ ಹೋಯಿತು. ಇದು ಪ್ರಯಾಣಿಕರು ಮತ್ತು ರೈಲ್ವೆ ಆಡಳಿತದಲ್ಲಿ ಆತಂಕ ಮೂಡಿಸಿತು. ನಂತರ ರೈಲ್ವೆ ಪೈಲಟ್ ರೈಲನ್ನು ಹಿಂದಕ್ಕೆ ಸರಿಸಿದ್ದರಿಂದ ಆ ಮಹಿಳೆಯ ಪ್ರಾಣ ಉಳಿಯಿತು. ಆದರೆ ಆ ಮಹಿಳೆಯ ಎರಡೂ ಕಾಲುಗಳು ಕಟ್ ಆಗಿವೆ.
ಪನ್ವೇಲ್ನಿಂದ ಥಾಣೆಗೆ ತೆರಳುತ್ತಿದ್ದ ರೈಲು ಬೇಲಾಪುರ ನಿಲ್ದಾಣದ ಮೂರನೇ ಪ್ಲಾಟ್ಫಾರ್ಮ್ಗೆ ಬರುತ್ತಿತ್ತು. ಅಲ್ಲಿ ಒಬ್ಬರು ಮಹಿಳೆ ರೈಲಿಗಾಗಿ ಕಾಯುತ್ತಾ ನಿಂತಿದ್ದರು. ರೈಲು ಬರುವಾಗ 50 ವರ್ಷದ ಮಹಿಳೆಯೊಬ್ಬರು ರೈಲು ಹಳಿ ಮೇಲೆ ಜಾರಿ ಬಿದ್ದರು. ಅಷ್ಟರಲ್ಲಾಗಲೇ ರೈಲು ಮಹಿಳೆಯ ಮೇಲೆ ಹಾದು ಹೋಗಿತ್ತು. ಆ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.