ಲಂಚ ಪಡೆಯುವ ಖಚಿತ ಮಾಹಿತಿ ಮೆರೆಗೆ ಲೊಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ಆಯುಕ್ತ ಐಗೂರ್ ಬಸವರಾಜ್ ಲೊಕಾ ಬಲೆಗೆ ಬಿದ್ದಿದ್ದಾರೆ. ಇದೇ ಹರಿಹರ ನಗರಸಭೆಯಲ್ಲಿ ಗುತ್ತಿಗೆದಾರನಿಂದ ಬಿಲ್ ಪಾಸ್ ಮಾಡಲು ಶೇ.10ರಷ್ಟು ಲಂಚ ಸ್ವೀಕರಿಸುವ ವೇಳೆ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯೆ ಹಾಗೂ ನಗರಸಭೆ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಕೇಲವೇ ವರ್ಷದ ಅಂತರದಲ್ಲಿ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಶನಿವಾರ ಲಂಚ ಪಡೆಯುವ ವೇಳೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಕಚೇರಿಯ ಭೂ ದಾಖಲೆಗಳ ವಿಭಾಗದ ಸಹಾಯಕ ನಿರ್ದೇಶಕಿ ಅಶ್ವಿನಿ ಹಾಗೂ ಮಾಲೂರು ಕಸಬಾ ಕಂದಾಯ ನಿರೀಕ್ಷಕ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಹೊಸಕೋಟೆ ಮೂಲದ ಮಹೇಶ್ ಎಂಬುವವರಿಂದ ಲಂಚ ಪಡೆಯುವ ವೇಳೆ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಹೊಸಕೋಟೆ ಬಳಿ ಬಡಾವಣೆ ಭೂ ಪರಿವರ್ತನೆಗೆ 40 ಸಾವಿರ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು ಶನಿವಾರ 30 ಸಾವಿರ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.