ಬಾಲಿವುಡ್ನ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಜೆನಿಲಿಯಾ ಡಿಸೋಜಾ ಹಾಗು ರಿತೇಷ್ ದೇಶ್ಮುಖ್ ಕೂಡ ಒಬ್ಬರು. ಪ್ರೀತಿಸಿ ಮದುವೆಯಾದ ಜೆನಿಲಿಯಾ ಹಾಗೂ ರಿತೇಷ್ ಮುದ್ದಾದ ಮಕ್ಕಳ ಜೊತೆ ಹಾಯಾಗಿ ಸಂಸಾರ ಮಾಡುತ್ತಿದ್ದಾರೆ.ಇದೀಗ ಈ ಸೆಲೆಬ್ರಿಟಿ ಜೋಡಿ ಅಂಗಾಗ ದಾನ ಮಾಡುವ ಘೋಷಣೆ ಮಾಡುವ ಮೂಲಕ ಮಾದರಿ ಆಗಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ದಂಪತಿಗೆ ಧನ್ಯವಾದ ಹೇಳಿದ್ದು, ಈ ವಿಡಿಯೋವನ್ನು ರಿತೇಷ್ ಶೇರ್ ಮಾಡಿದ್ದಾರೆ.
ಜುಲೈಯಲ್ಲಿ ನಡೆಯುತ್ತಿರುವ ಅಂಗಾಂಗ ದಾನದ ತಿಂಗಳಲ್ಲಿ ತಮ್ಮ ಅಂಗಾಂಗ ದಾನ ಮಾಡಿದ ಬಾಲಿವುಡ್ ದಂಪತಿ ರಿತೇಶ್, ಜೆನಿಲಿಯಾಗೆ ಧನ್ಯವಾದಗಳು. ಇದು ಇತರರನ್ನು ಸಹ ಪ್ರೇರಣೆ ನೀಡುತ್ತದೆ ಎಂದು ಈ ಜೋಡಿಯ ವಿಡಿಯೋ ಶೇರ್ ಮಾಡಿ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಈ ಮೊದಲು ರಿತೇಷ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ನಾನು ಹಾಗೂ ಜೆನಿಲಿಯಾ ನಮ್ಮ ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದೇವೆ’ ಎಂದು ರಿತೇಷ್ ಹೇಳಿದ್ದರು. ಈ ವಿಚಾರವನ್ನು ಜೆನಿಲಿಯಾ ಕೂಡ ಖಚಿತಪಡಿಸಿದ್ದರು. ಇನ್ನೂ ರಿತೇಶ್ ನಟನೆಯ ‘ಕಾಕುಡ’ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಜೆನಿಲಿಯಾ ಇದೀಗ ಕನ್ನಡದ ‘ಜ್ಯೂನಿಯರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶ್ರೀಲೀಲಾ ನಟನೆಯ ಚಿತ್ರವಾಗಿದ್ದು ರಿಲೀಸ್ ಗೆ ರೆಡಿಯಾಗಿದೆ.