ಭಾರತೀಯ ಮೂಲದ 9 ವರ್ಷದ ಬಾಲಕಿ ಪ್ರನಿಸ್ಕಾ ಮಿಶ್ರಾ ಅವರ ಹಾಡಿನ ವೀಡಿಯೊವನ್ನು ಉದ್ಯಮಿ ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ‘ಅಮೆರಿಕಾಸ್ ಗಾಟ್ ಟ್ಯಾಲೆಂಟ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಡುಗಿಯ ಅದ್ಭುತ ಹಾಡಿನ ಪ್ರದರ್ಶನವನ್ನ ಆನಂದ್ ಮಹೀಂದ್ರ ಶೇರ್ ಮಾಡಿದ್ದಾರೆ.
ಇನ್ನು ಪ್ರನಿಸ್ಕಾ ಮಿಶ್ರಾರವರ ಹಾಡುಕೇಳಿ ಸಂತೋಷವ್ಯಕ್ತಪಡಿಸಿ, ಆಕೆಯನ್ನ ಹಾಡಿ ಹೊಗಳಿದ್ದಾರೆ.. ಆಕೆಯ ವೀಡಿಯೊವನ್ನು ಹಂಚಿಕೊಂಡ ಅವರು, ಎರಡನೇ ಬಾರಿಗೆ, ಕಳೆದ ಎರಡು ವಾರಗಳಲ್ಲಿ, ಭಾರತೀಯ ಮೂಲದ ಯುವತಿಯೊಬ್ಬಳು ಎಲ್ಲರನ್ನ ಬೆರಗುಗೊಳಿಸಿದ್ದಾಳೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಅಷ್ಟೆ ಅಲ್ಲದೇ ಆಕೆಯ ಹಾಡಿಗೆ ಕಾರ್ಯಕ್ರಮದ ತೀರ್ಪುಗಾರರು ಸಹ ಗೋಲ್ಡನ್ ಬಜರ್ ನೀಡಿ ಗೌರವಿಸಿದ್ದಾರೆ. ಇನ್ನು ಕೊನೆಯಲ್ಲಿ ಆಕೆಯ ಅಜ್ಜಿಯನ್ನು ಕರೆದಾಗ ನನಗೂ ಕಣ್ಣೀರು ಬಂತು. ಅಮೆರಿಕದಲ್ಲಿ ನಿಜಕ್ಕೂ ಒಳ್ಳೆಯ ಪ್ರತಿಭೆಗಳಿದ್ದಾರೆ. ಮತ್ತು ಅದರಲ್ಲಿ ಬಹಳಷ್ಟು ಮಂದಿ ಭಾರತೀಯರು ಇದ್ದಾರೆಂದು ಉದ್ಯಮಿ ಆನಂದ್ ಮಹೀಂದ್ರ ನಮ್ಮ ಭಾರತೀಯ ಪ್ರತಿಭೆಗಳನ್ನ ಹೊಗಳಿದ್ದಾರೆ.