ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಗೌರಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಇದೇ ವೇಳೆ ಸಮರ್ಜಿತ್ ಲಂಕೇಶ್ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಸಂದರ್ಶನ ಮಾಡಿದ್ದರು. ಸುದೀಪ್ ಅವರು ಈಗ ಪತ್ನಿ ಬಗ್ಗೆ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಹಾಗೂ ಪ್ರಿಯಾ 2001ರಲ್ಲಿ ಮುವೆಯಾದರು. ಇವರ ಮದುವೆ ಆಗಿ 23 ವರ್ಷಗಳು ಕಳೆದಿವೆ. ಸಾನ್ವಿ ಹೆಸರಿನ ಮಗಳು ಇದ್ದಾರೆ. ಸುದೀಪ್ ಅವರ ವೃತ್ತಿ ಬದುಕಿಗೆ ಪ್ರಿಯಾ ಬೆಂಬಲವಾಗಿ ನಿಂತಿದ್ದಾರೆ. ಇದೀಗ ಸಂದರ್ಶನದಲ್ಲಿ ಸುದೀಪ್ ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಹೆಂಡತಿ ಕುರಿತಾಗಿ ಹಾಡಿ ಹೊಗಳಿದ್ದಾರೆ.
ಪ್ರಿಯಾ ಬಗ್ಗೆ ಮಾತನಾಡಿ ಎಂದು ಸಮರ್ಜಿತ್ ಅವರು ಸುದೀಪ್ಗೆ ಕೇಳಿದರು. ‘ಸದಾ ತಾಳ್ಮೆ, ಶಾಂತವಾಗಿರೋ ವ್ಯಕ್ತಿ ಅವರು. ಅವರು ಇಷ್ಟು ವರ್ಷ ನನ್ನನ್ನು ಹ್ಯಾಂಡಲ್ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿದರೂ ತಪ್ಪಿಲ್ಲ. ಪ್ರಿಯಾ ಅವರಲ್ಲಿ ಪ್ರಬುದ್ಧತೆ ಇದೆ. ನನ್ನ ಕರಿಯರ್ ಆರಂಭದಲ್ಲಿ ತುಂಬಾ ಏರಿಳಿತ ಕಂಡೆ. ಹುಚ್ಚ ಸಿನಿಮಾ ಬಳಿಕವೂ ನಾನು ಕುಗ್ಗಿದ್ದೆ. ಖ್ಯಾತಿ ಇತ್ತು ಆದರೆ ದುಡ್ಡು ಇರ್ತಾ ಇರಲಿಲ್ಲ. ಆಗ ಅವರು ನನ್ನ ಪರವಾಗಿ ನಿಂತರು. ಎಲ್ಲಾ ಕ್ರೆಡಿಟ್ ಅವರಿಗೆ ಹೋಗಬೇಕು’ ಎಂದಿದ್ದಾರೆ ಸುದೀಪ್.
ʻʻನಾನು ಉದ್ಯಮಕ್ಕೆ ಕಾಲಿಟ್ಟಾಗ ರಾಜ್ಕುಮಾರ್ ಅವರು ಸಿನಿಮಾ ಮಾಡ್ತಾ ಇದ್ದರು. ಅಂಬರೀಶ್ ಸೇರಿದಂತೆ ಅನೇಕ ನಟರು ಆಗ ನಟನೆ ಮಾಡುತ್ತಲೇ ಇದ್ದರು. ಶಿವಣ್ಣ, ಉಪೇಂದ್ರ ಕೂಡ ಇದ್ದರು. ಆಗ ನಾವು ಕ್ಲಿಕ್ ಆಗ್ತೀವಾ ಎನ್ನೋದೇ ಡೌಟ್ ಇತ್ತು. ಆದರೆ ಲಕ್ಕಿ..ಜಾಗ ಇದೆ ಎಂದು ತಿಳಿಯಿತು. ಯಾರೋ ಜಾಗ ಖಾಲಿ ಮಾಡಿ ಹೋಗಿದ್ದಾರೆ ನಾನು ತುಂಬುತ್ತೇನೆ ಎಂದರೆ ಆಗಲ್ಲ. ಜನಗಳ ಮನಸಲ್ಲಿ ಮೊದಲು ಇಳಿಯಬೇಕು. ನಾನು ಮೊದಲು ಕ್ರಿಕೆಟರ್ ಆಗಬೇಕು ಎಂದು ಅಂದುಕೊಂಡಿದ್ದೆ. ನನ್ನ ತಂದೆ ಮಾಡಲು ಬಿಡಲಿಲ್ಲ. ಬಳಿಕ ಅಮ್ಮ ನನ್ನ ಪಕ್ಕ ನಿಂತಿದ್ದರು. ಎಲ್ಲವನ್ನೂ ಅವನಿಗೆ ತಡಿಬೇಡಿ ಮಾಡಲು ಬಿಡಿ ಎಂದಿದ್ದರು. ನನ್ನ ತಂದೆ ಉದ್ಯಮಿ. ಆದರೆ ನಾನು ನನ್ನ ಹಾರ್ಡ್ ವರ್ಕ್ ಬಿಟ್ಟಿರಲಿಲ್ಲ. ನಾನು ಉದ್ಯಮಿ ಆಗುತ್ತೇನೆ ಎಂದು ತಂದೆಗೆ ಅನಿಸುತ್ತಿರಲಿಲ್ಲ. ಅವರ ಬಳಿ ಹೋಗಿ ನಾನು ಹೀರೋ ಆಗ್ತೀನಿ ಎಂದೆ. ಅವರು ಒಪ್ಪಿದರು. ಜನರ ಮಧ್ಯೆ ನಿಂತಾಗ ಬೀಳೋ ಸಿಳ್ಳೆ ಖುಷಿ ನೀಡುತ್ತದೆ. ಹೀಗಾಗಿ ನನಗೆ ನಟ ಆಗಬೇಕು ಎಂದು ಅನಿಸುತ್ತಿತ್ತು’ ಎಂದಿದ್ದಾರೆ ಸುದೀಪ್.