ಮಳೆರಾಯನ ಆಗಮನದಿಂದ ಮನಸ್ಸು ಖುಷಿಯಿಂದ ಕುಣಿದಾಡುವುದು ಸಹಜ. ಆದರೆ ವರುಣನ ಬರುವಿಕೆಯೊಂದಿಗೆ ಸೊಳ್ಳೆಗಳು ಜೊತೆಯಾಗಿಯೇ ಬರುತ್ತವೆ. ಮಳೆಗಾಲದಲ್ಲಿ ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ಸೇರಿದಂತೆ ಹಲವು ರೋಗಗಳು ಹರಡುತ್ತವೆ. ಇತ್ತೀಚಿಗೆ ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿವೆ.
ಅದ್ರಲ್ಲೂ ಒಂದೇ ದಿನ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ..
ಯೆಸ್.. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ವರ್ಷ ದಾಖಲಾದ ಪ್ರಕರಣಗಳ ಪ್ರಕಾರ ರಾಜ್ಯದಲ್ಲಿ ಬರೋಬ್ಬರಿ 7,000 ಗಡಿಯನ್ನು ಮೀರಿದೆ. ಕರ್ನಾಟಕದಲ್ಲಿ 7,006 ಜನರಿಗೆ ವೈರಲ್ ಸೋಂಕು ಇರುವುದು ಪತ್ತೆಯಾಗಿದೆ. ಇನ್ನೂ ಡೆಂಗ್ಯೂ ಪ್ರಕರಣ ರಾಜ್ಯದಲ್ಲಿ ತಾಂಡವವಾಡುತ್ತಿದ್ದು, ಮಾರಕ ಜ್ವರಕ್ಕೆ ಮೃತಪಡುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಡೆಂಗ್ಯೂ ಜ್ವರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.
ರಾಜ್ಯದಲ್ಲಿ ಡೆಂಘೀ ದಂಡಯಾತ್ರೆ ಕಳೆದ 24 ಗಂಟೆಯಲ್ಲಿ 159 ಜನರಲ್ಲಿ ಡೆಂಘೀ ಕೇಸ್ ವರದಿಯಾಗಿದೆ.. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 80 ಜನರಲ್ಲಿ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ 301 ಜನ ಡೆಂಘೀ ಜ್ವರದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಬಿಬಿಎಂಪಿ ವ್ಯಾಪ್ತಿಯಲ್ಲಿ 130 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.. ರಾಜ್ಯದ 924 ಡೆಂಘೀ ಶಂಕಿತರಿಗೆ ಪರೀಕ್ಷೆ ಅದರಲ್ಲಿ 159 ಜನರಲ್ಲಿ ಡೆಂಘೀ ಪತ್ತೆಯಾಗಿದ್ದು, ಜುಲೈ 4ರಂದು 1504 ಡೆಂಘೀ ಶಂಕಿತರಿಗೆ ಟೆಸ್ಟಿಂಗ್, ನಿನ್ನೆ 954 ಶಂಕಿತರಿಗೆ ಟೆಸ್ಟಿಂಗ್ ಮಾಡಲಾಗಿದೆ..
ಡೆಂಗ್ಯೂ ಕೇಸ್ ವರದಿ ನೋಡುವುದಾದರೆ..
ವಯೋವಾರು ಡೆಂಘೀ
ವರ್ಷ. 24ಗಂಟೆಯಲ್ಲಿ. ಒಟ್ಟು(ಜನವರಿಯಿಂದ)
0 to 1. 3 135
1 to 18. 48 2496
18 ವರ್ಷ
ಮೇಲ್ಪಟ್ಟ. 108. 4534
========
HEADER: ಡೆಂಘೀ ದಂಡಯಾತ್ರೆ
ಜುಲೈ 7 (ರಾಜ್ಯ)
ಹೊಸ ಪ್ರಕರಣ 159
ಸಕ್ರೀಯ ಪ್ರಕರಣ. 301
ಟೆಸ್ಟಿಂಗ್ 954
ಜುಲೈ 7 (ಬಿಬಿಎಂಪಿ)
ಹೊಸ ಪ್ರಕರಣ 80
ಸಕ್ರೀಯ ಪ್ರಕರಣ. 130
ಟೆಸ್ಟಿಂಗ್ 191
======
ಜುಲೈ 6 (ರಾಜ್ಯ)
ಹೊಸ ಪ್ರಕರಣ 175
ಸಕ್ರೀಯ ಪ್ರಕರಣ. 352
ಟೆಸ್ಟಿಂಗ್ 753
ಜುಲೈ 6 (ಬಿಬಿಎಂಪಿ)
ಹೊಸ ಪ್ರಕರಣ 115
ಸಕ್ರೀಯ ಪ್ರಕರಣ. 127
ಟೆಸ್ಟಿಂಗ್ 275
======
ಜುಲೈ 5( ರಾಜ್ಯ)
ಹೊಸ ಪ್ರಕರಣ 155
ಸಕ್ರೀಯ ಪ್ರಕರಣ. 142
ಟೆಸ್ಟಿಂಗ್ 899
ಜುಲೈ 5 (ಬಿಬಿಎಂಪಿ)
ಜುಲೈ 4(ರಾಜ್ಯ)
ಹೊಸ ಪ್ರಕರಣ 286
ಸಕ್ರೀಯ ಪ್ರಕರಣ. 286
ಟೆಸ್ಟಿಂಗ್ 1502
ಜುಲೈ 4 (ಬಿಬಿಎಂಪಿ)
ಹೊಸ ಪ್ರಕರಣ 123
ಸಕ್ರೀಯ ಪ್ರಕರಣ. 123
ಟೆಸ್ಟಿಂಗ್ 527
ಇನ್ನು ಈ ಡೆಂಗ್ಯೂ ತಡೆಯಲು ಹರಸಾಹಸ ಪಡುತ್ತಿದ್ದು ಇದೀಗ ಟೀಮ್ ಮಾಡಿದ್ದಾರೆ.. 3ಸಾವಿರ ಟಿಮ್ ಮೂಲಕ ಡೆಂಘೀ ವಿರುದ್ಧ ಕೆಲಸ ಮಾಡ್ತಿದ್ದು, ಟೀಮ್ ಮನೆ ಮನೆಗೆ ತೆರಳಿ ಜಾಗ್ರತಿ ಮೂಡಿಸಲು ಎಚ್ಚರಿಕೆ ನೀಡಿದ್ದಾರೆ..
ಇತ್ತಾ ಸಾರ್ವಜನಿಕರಿಗೂ ಡೆಂಗ್ಯೂ ಬಗ್ಗೆ ಜಾಗರೂಕರಾಗಿರುವಂತೆ ಎಂದು ಮನವಿ ಮಾಡಿದ್ದಾರೆ..ಸೊಳ್ಳೆ ನಿಯಂತ್ರಣಕ್ಕೆ ಸಂಭಂದಿಸಿದ ಸೂಚನೆಯನ್ನ ಜನ ಪಾಲೀಸಬೇಕು..ಬೆಂಗಳೂರಲ್ಲಿ 776ಕೇಸ್ ಗಳು
ಪಾಸಿಟಿವ್ ಬಂದಿದೆ .. ನಿತ್ಯ 130/140ಕೇಸ್ ಬರ್ತಿದೆ .. ಸ್ಪೇಯರ್ ಹಾಗೂ ಫಾಗಿಂಗ್ ಮಷಿನ್ ಕಳಿಸ್ತಾಇದ್ದೇವೆ .. ಇದುವರೆಗೂ 3815 ಕೇಸ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ.. ಮಳೆ ಹೆಚ್ಚಾದ್ರೆ ಲಾರ್ವಾ ಗಳು ಹೋಗಿ ಬಿಡುತ್ತದೆ ….ಆದರೆ ಬೆಂಗಳೂರಲ್ಲಿ ಮಳೆ ಹೆಚ್ಚು ಬರ್ತಿಲ್ಲವಾರ್ಡ್ ನಲ್ಲಿ ಈಗ 3 ಮ್ಯಾನ್ ಪವರ್ ಇದೆ,ಅದನ್ನ 6ಕ್ಕೆ ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ..
ಒಟ್ಟಾರೆ.. ಬಿಬಿಎಂಪಿ ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅಗತ್ಯ ಕ್ರಮ ಕೈಗೊಂಡಿದೆ. ಡೆಂಗ್ಯೂ ನಿಯಂತ್ರಣ ಕ್ರಮಗಳಾದ ಜಾಗೃತಿ ಮೂಡಿಸುವುದು, ಮನೆ-ಮನೆ ಸಮೀಕ್ಷೆ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಸ್ಪ್ರೇ ಮತ್ತು ಫಾಗಿಂಗ್ನಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇದು ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ. ಆದ್ರೆ ಮುಂದೆ