ಬಹುಭಾಷಾ ಗಾಯಕಿ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೋ ಉತ್ತುಪ್ ನಿನ್ನೆ (ಜು.8) ಹೃದಯಾಘಾತದಿಂದ ನಿಧನರಾಗಿದ್ದಾರೆ. 78ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ಜಾನಿ ಚಾಕೋಗೆ ಕುಟುಂಬಸ್ಥರು ಆಪ್ತರು ಕಂಬನಿ ಮಿಡಿದಿದ್ದಾರೆ.
ಜಾನಿ ಚಾಕೋ ಅವರಿಗೆ ಜು.8ರಂದು ತಮ್ಮ ಕೋಲ್ಕತ್ತಾದ ನಿವಾಸದಲ್ಲಿ ಟಿವಿ ನೋಡ್ತಿದ್ದ ವೇಳೆ ಹೃದಯಾಘಾತವಾಗಿದೆ. ಆ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇಂದು (ಜು.9) ಜಾನಿ ಚಾಕೋ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಹುಭಾಷಾ ಗಾಯಕಿಯಾಗಿ ಹೆಸರು ಮಾಡಿರುವ ಉಷಾ ಉತ್ತುಪ್ ಅವರು ಕನ್ನಡದ ‘ಸ್ವಾಮಿ’ ಚಿತ್ರದ ರಂಬೆ ನಿನಗೆ, ಇತ್ತೀಚೆಗೆ ತೆರೆಕಂಡ ಅಭಿಷೇಕ್ ಅಂಬರೀಶ್, ರಚಿತಾರಾಮ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿದ್ದರು.