ರಾಜ್ಯಾದ್ಯಂತ ಸಾಕಷ್ಟು ಮಂದಿ ಸ್ಥಿತಿವಂತರೂ ಬಿಪಿಎಲ್ ಕಾರ್ಡ್ ಹೊಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಜಿಲ್ಲಾಡಳಿಕ್ಕೆ ಆದೇಶವನ್ನು ನೀಡಲಾಗಿದೆ. ಆಹಾರ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್, ಜಾಯಿಂಟ್ ಡೈರೆಕ್ಟರ್ಗಳು ಜಿಲ್ಲಾ ಮಟ್ಟದಲ್ಲಿ ಇದನ್ನು ಪರಿಶೀಲನೆ ನಡೆಸಲಿದ್ದಾರೆ. APL ಲಿಸ್ಟ್ನಲ್ಲಿರಬೇಕಾದವರು BPL ಲಿಸ್ಟ್ನಲ್ಲಿದ್ದರೇ ಅಂಥವರನ್ನು BPL ನಿಂದ ತೆಗೆದು APL ಗೆ ಟ್ರಾನ್ಸಫರ್ ಮಾಡಲಾಗುತ್ತದೆ. ಆಗ ಅವರು APL ನಲ್ಲಿ ಸಿಗುವ ಅಕ್ಕಿ ಪಡಿತರವನ್ನು ಪಡೆದುಕೊಳ್ಳಬಹುದು ಎಂದರು.
BPL ಕಾರ್ಡ್ದಾರರಿಗೆ ಅದರದ್ದೇ ಆದ 30 ಮಾನದಂಡಗಳಿವೆ. ಆ ಮಾನದಂಡಗಳ ಒಳಗೆ ಬಂದರೇ ಅವರಿಗೆ ನಾವು BPL ಸೌಲಭ್ಯ ನೀಡಲಿದ್ದೇವೆ. ಮಾನದಂಡಕ್ಕೆ ಅರ್ಹರಲ್ಲದಿದ್ದರೇ ಅವರನ್ನು ಎಪಿಎಲ್ ಲಿಸ್ಟ್ಗೆ ಸೇರಿಸಲಾಗುತ್ತದೆ ಎಂದರು.