ಬೆಂಗಳೂರು:- ರಾಜ್ಯದ ಹಿರಿಯ ನಾಗರಿಕರೀಕರಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿಯೊಂದು ಸಿಗುತ್ತಿದೆ.
ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ಪ್ರತೀ ವರ್ಷ ಕೂಡ ಉಚಿತ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದ್ದು, ಈ ಬಾರಿ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ
ಶಕ್ತಿ ಯೋಜನೆ ಜಾರಿ ಮಾಡಿದ ಮೇಲೆ ಬಹುತೇಕ ಬಸ್ ನಲ್ಲಿ ಮಹಿಳೆಯರಿಗೆ ಮೀಸಲಾತಿ ಇರುವಂತೆ ಹಿರಿಯ ನಾಗರಿಕರಿಗೂ ಕೂಡ 25% ನಷ್ಟು ಮೀಸಲಾತಿ ಇದ್ದೇ ಇರುತ್ತದೆ. ಹಾಗಾಗಿ ನೀವು ಹಿರಿಯ ನಾಗರಿಕರ ಉಚಿತ ಬಸ್ ಪಾಸ್ ಕಾರ್ಡ್ ಮಾಡಿಸಿದರೆ ಓಲೋ, ಕೆಎಸ್ಆರ್ಟಿಸಿ (KSRTC) ಮತ್ತು ಬಿಎಂಟಿಸಿ (BMTC) ನಲ್ಲಿ ಪ್ರಯಾಣ ಮಾಡಬಹುದು. ಕೆಲವು ಬಸ್ ಗಳಲ್ಲಿ ಉಚಿತ ಪ್ರಯಾಣ ಸಿಕ್ಕರೆ ಇನ್ನು ಕೆಲವು ಬಸ್ ಗಳಲ್ಲಿ ನಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಬಹುದಾಗಿದೆ.
ಉಚಿತ ಬಸ್ ಪಾಸ್ ಗೆ ಅರ್ಜಿ ಈ ದಾಖಲೆಗಳು ಅಗತ್ಯ:
ಆಧಾರ್ ಕಾರ್ಡ್.
ಭಾರತದ ವಾಸ್ತವ್ಯ ಪುರಾವೆ ಇರಬೇಕು.
ವಯಸ್ಸಿನ ದೃಢೀಕರಣ ಪತ್ರ.
ಫೋಟೋ ಇರಬೇಕು.
ಮೊಬೈಲ್ ಸಂಖ್ಯೆ ಅಗತ್ಯವಾಗಿದೆ.
ಅರ್ಜಿ ಎಲ್ಲಿ ಸಲ್ಲಿಸುವುದು?
ಹಿರಿಯ ನಾಗರಿಕರಿಗೆ ಮಾತ್ರ ಈ ವ್ಯವಸ್ಥೆ ಇರಲಿದ್ದು ಅರ್ಹರು ಅಗತ್ಯ ದಾಖಲೆಗಳ ಸಮೇತ ನಿಮ್ಮಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಹತ್ತಿರದ ಕಂಪ್ಯೂಟ ರ್ಸೆಂಟರ್ ಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಬಹುದು. ಹೀಗೆ ಸಲ್ಲಿಕೆ ಮಾಡಿದ್ದ ಅರ್ಜಿ ಆನ್ಲೈನ್ ಮೂಲಕ ಸಂಬಂಧ ಪಟ್ಟ ಇಲಾಖೆಯ ಅಧೀನಕ್ಕೆ ಬರಲಿದ್ದು ಬಳಿಕ ಪರಿಶೀಲನೆ ಆಗಿ ಅನಂತರ ಉಚಿತ ಬಸ್ ಪಾಸ್ ನಿಮಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ವಿಮಾನ , ಹಾಗೂ ರೈಲುಗಳಲ್ಲಿ, ಬಸ್ ಪಾಸ್ ನಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಇದೆ. ಅಷ್ಟು ಮಾತ್ರವಲ್ಲದೇ ಆದಾಯ ತೆರಿಗೆಯಲ್ಲೂ ವಿನಾಯಿತಿ ಇದ್ದು ಎಲ್ಲ ಸೌಲಭ್ಯ ಬಳಸಿಕೊಳ್ಳಿ.